ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದಾಗಿ ಜನರು ಅಕ್ಷರಶಃ ತತ್ತರಿಸಿದಾರೆ. ಕಾಮಾಕ್ಯದಲ್ಲಿ ಮನೆಗಳಿಗೆ ನೀರು ನುಗ್ಗಿ ಒಂದು ಕಡೆ ಅವಾಂತರ ಆದ್ರೆ ಮತ್ತೊಂದು ಕಡೆ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮೆಡಿಕಲ್ ಕಿಟ್‌ಗಳು ಸೇರಿದಂತೆ ಮೆಡಿಸನ್ ಕೊಳಚೆ ನೀರಿನಿಂದ ಸಂಪೂರ್ಣವಾಗಿ ನಾಶವಾಗಿವೆ.
ಒಂದೊಂದು ಮನೆಯಲ್ಲಿಯೂ ಸುಮಾರು 30ರಿಂದ 40 ಸಾವಿರದಷ್ಟು ನಷ್ಟವಾಗಿದೆ. ಇನ್ನು ಇತ್ತ ಎಸ್.ಕೆ ಎಂಟರ್ ಪ್ರೈಸಸ್‌ನಲ್ಲಿ ಎಲ್ಲಾ ಮೆಡಿಕಲ್ ಕಿಟ್‌ಗಳು ಮಳೆಯಿಂದ ಜಲಾವೃತ್ತವಾಗಿದ್ದು, ಸುಮಾರು 15 ರಿಂದ 20 ಲಕ್ಷ ಮೆಡಿಸನ್ ಐಟಮ್‌ಗಳು ಧ್ವಂಸವಾಗಿವೆ. ಹೀಗಾಗಿ ಮೆಡಿಕಲ್ ಔಷಧಿಗಳನ್ನು ಬಿಸಿಲಿನಲ್ಲಿಟ್ಟು ಒಣಗಿಸುತ್ತಿದ್ದಾರೆ. ಆದರೂ ಔಷಧಿಗಳನ್ನ ಮತ್ತೆ ಉಪಯೋಗಿಸಲು ಸಾಧ್ಯವಾಗದ ಮಟ್ಟಿಗೆ ಹಾಳಾಗಿವೆ. ಹೀಗಾಗಿ ಮೆಡಿಕಲ್ ಕಂಪನಿಯ ಮಾಲೀಕ ಸಂಕಷ್ಟಕ್ಕೆ ಸಿಲುಕಿ ದಿಕ್ಕು ತೋಚದಂತಾಗಿದ್ದಾರೆ. ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ.
PublicNext
17/04/2022 05:10 pm