ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆ ಸಂರಕ್ಷಣಾ ಸಮಿತಿ ಕಾರ್ಯಗಾರದಲ್ಲಿ ಹಿರಿಯ ನ್ಯಾಯಾಧೀಶರು ಸಂದೀಪ್‌ ಸಾಲಿಯಾನ್ ಭಾಗಿ

ಆನೇಕಲ್: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಎನ್ವಿರೋನ್ಮೆಂಟ್ ಸಪೋರ್ಟ್ , ಕೆರೆ ಸಂರಕ್ಷಣಾ ಸಮಿತಿ ಸಹಭಾಗಿತ್ವದಲ್ಲಿ ಒಂದು ದಿನದ ಕಾರ್ಯಾಗಾರವನ್ನು ಅನೇಕಲ್ ತಾಲೂಕು ಪಂಚಾಯಿತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದರು

ಇನ್ನು ಈ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಂದೀಪ್ ಸಾಲಿಯಾನ್ ಮಾತನಾಡಿ ಕರ್ನಾಟಕದ ಕೆರೆ ಉಳಿವಿಗೆ 2014ರ ಸಂರಕ್ಷಣಾ ಕಾಯ್ದೆ ಓದಬೇಕು, ಅದರಲ್ಲಿ ಇರುವ ಕಾನೂನಿನ ಅಡಿಯಲ್ಲಿ ನಾವು ಕೆರೆ ಉಳಿಸಲು ಮುಂದಾಗಬೇಕು,

ನಾವು ಆಯ್ಕೆ ಮಾಡಿದವರನ್ನು ಪ್ರಶ್ನೆ ಮಾಡುವ ಹಕ್ಕು ನಮಗಿದೆ,ಗ್ರಾಮ ಪಂಚಾಯತಿ ಸದಸ್ಯರಿಗೆ ತಮ್ಮ ವ್ಯಾಪ್ತಿಯಲ್ಲಿ ಎಷ್ಟು ಕೆರೆ ಇದೆ ಎನ್ನುವ ಮಾಹಿತಿ ಇಲ್ಲ, ಇಂತಹ ಜನಪ್ರತಿನಿಧಿಗಳಿಂದ ಬದಲಾವಣೆ ಹೇಗೆ ಸಾದ್ಯ,ಮೊದಲು ನಾವು ಯೋಜನೆ ಅದರ ರೂಪುರೇಷೆ ಹೇಗಿರಬೇಕು ಎಂದು ಅರಿಯಬೇಕು ಆಗ ಕಾನೂನು ರೀತಿಯಲ್ಲಿ ಯೋಜನೆ ರೂಪಿಸಿ,ದೇಶ,ಸಮಾಜದಲ್ಲಿ ಬದಲಾವಣೆ ತರಲು ಸಾದ್ಯ ಎಂದರು.

ಇನ್ನು ಕಾರ್ಯಕ್ರಮದಲ್ಲಿ ಕೆರೆ ಸಂರಕ್ಷಣಾ ಸಮಿತಿ ಸದಸ್ಯರು, ನ್ಯಾಯಾಧೀಶರು, ಆನೇಕಲ್ ವಕೀಲ ಸಂಘದ ಅಧ್ಯಕ್ಷರು, ಗಣ್ಯಾತಿಗಣ್ಯರು ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

18/06/2022 08:11 pm

Cinque Terre

3.46 K

Cinque Terre

0

ಸಂಬಂಧಿತ ಸುದ್ದಿ