ಯಲಹಂಕ: ಕಾಲಿಡಲು ಸಾಧ್ಯವಾಗದಷ್ಟು ಜನ. ಪೀಕ್-ಟೈಮ್‌ನಲ್ಲಿ ನಿಲ್ಲಲಾಗದೆ, ಬಸ್ಗಳು ಮುಂದಕ್ಕೆ ಚಲಿಸಲಾಗದಷ್ಟು ಟ್ರಾಫಿಕ್ ಜಾಮ್. ಯಲಹಂಕ ಓಲ್ಡ್-ಟೌನ್ ಬಸ್ ನಿಲ್ದಾಣ ಬಸ್ಸು & ಜನಗಳಿಲ್ಲದೆ ಈಗ ಬಣಗುಡುತ್ತಿದೆ. ಒಂದು ರೂಟ್‌ನಲ್ಲಿ ಬಸ್ ನ ಜೊತೆ ಒಬ್ಬನೆ ಒಬ್ಬ ಪ್ರಯಾಣಿಕ ಪ್ರಯಾಣಿಸಿದ್ದು, ಇವೊತ್ತಿನ ವೀಕೆಂಡ್ ಕರ್ಫ್ಯೂ ಎಫೆಕ್ಟ್‌ಗೆ ಸಾಕ್ಷಿಯಾಗಿತ್ತು.
ಬೆಂಗಳೂರು & ಇಂಟರ್ನ್ಯಾಷನಲ್ ಏರ್ಪೋರ್ಟ್್ನ ಸಂಪರ್ಕ ಕೊಂಡಿಯಂತಿರುವ ಯಲಹಂಕ ಮಾರ್ಗವಾಗಿ ಪ್ರತಿದಿನ ಸಾವಿರಕ್ಕು ಹೆಚ್ಚು ಬಸ್ಗಳು ಸಂಚರಿಸುತ್ತವೆ. ಯಲಹಂಕದಿಂದ ಶಿವಾಜಿನಗರ ಮಾರ್ಗವಾಗಿ, ಹಾಗೆಯೇ ಯಲಹಂಕದಿಂದ ಯಶವಂತಪುರ, ಜಾಲಹಳ್ಳಿ ಕ್ರಾಸ್, ರಾಜರಾಜೇಶ್ವರಿ ನಗರಗಳ ಕಡೆಗಳಿಗೂ ಇಲ್ಲಿಂದ ಪ್ರತಿದಿನ 307 ಟ್ರಿಪ್ ಬಸ್ಗಳು ಸಂಚರಿಸುತ್ತಿದ್ದವು.
ಆದರೆ ಇಂದು ವೀಕೆಂಡ್ ಕರ್ಫ್ಯೂನ ಎರಡನೇ ಭಾನುವಾರ ಯಲಹಂಕ ಮಾರ್ಗವಾಗಿ ಕೇವಲ 21 ರೂಟ್ ಬಸ್ಗಳು ಮಾತ್ರ ಸಂಚರಿಸಿವೆ. 21 ರೂಟ್ಗಳಲ್ಲಿ ಕೇವಲ ಒಬ್ಬರೊ, ಇಬ್ಬರೊ ಪ್ರಯಾಣಿಕರು ಮಾತ್ರ ರಸ್ತೆಗಳಲ್ಲಿ ಬಸ್ಗಳಲ್ಲಿ ಓಡಾಡುತ್ತಿದ್ದಾರೆ. ಶೇಕಡ 3 ರಿಂದ 5 ರಷ್ಟು ಜನ ಮಾತ್ರ ಬಸ್ಗಳಲ್ಲಿ ಓಡಾಡಿದ್ದಾರೆ ಅಂತಿದ್ದಾರೆ ಬಿಎಂಟಿಸಿ ಸಿಬ್ಬಂದಿ.
ಇನ್ನು ಯಲಹಂಕದಲ್ಲಿ ಎರಡನೇ ಭಾನುವಾರದ ವೀಕೆಂಡ್ ಕರ್ಫ್ಯೂಗೆ ಜನ ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬೆಂಬಲ ಸೂಚಿಸಿದ್ದಾರೆ. ರಸ್ತೆಗಳಲ್ಲಿ ಕೇವಲ 5 ರಷ್ಟು ವಾಹನಗಳು ಮಾತ್ರ ಓಡಾಡುತ್ತಿದ್ದವು. ಬೆಂಗಳೂರು ದೇವನಹಳ್ಳಿ ಏರ್ಪೋರ್ಟ್ ರಸ್ತೆ ಖಾಲಿ ಖಾಲಿಯಾಗಿತ್ತು. ಇನ್ನು ಕೋಗಿಲು ಕ್ರಾಸ್‌ನಲ್ಲು ಬೆರಳೆಣಿಕೆಯಷ್ಟು ವಾಹನ ಮಾತ್ರ ರಸ್ತೆಗಳಲ್ಲಿ ಕಂಡು ಬಂತು.
ಒಟ್ಟಾರೆ ಎರಡನೇ ವಾರದ ಎರಡನೇ ಭಾನುವಾರ ವೀಕೆಂಡ್ ಕರ್ಫ್ಯೂ ಜನ ಸ್ವಯಂ ಪ್ರೇರಿತರಾಗಿ ಬೆಂಬಲ ಸೂಚಿಸಿದ್ದಾರೆ ಎನ್ನುವುದು ರಸ್ತಗಳ ಸ್ಥಿತಿಗತಿ ನೋಡಿದರೆ ಗೊತ್ತಾಗುತ್ತೆ.
PublicNext
16/01/2022 05:35 pm