ಬೆಂಗಳೂರು. ಬೆಂಗಳೂರು ನಿತ್ಯ ಟ್ರಾಫಿಕ್ ಸಮಸ್ಯೆ ಎಲ್ರಿಗೂ ಗೊತ್ತೆ ಇದೆ. ಅದ್ರಲ್ಲೂ ಕಾರ್ಪರೇಷನ್ ಸರ್ಕಲ್. ನೃಪತುಂಗ ರಸ್ತೆ ಜಂಕ್ಷನ್ ಅಂತೂ ಟ್ರಾಫಿಕ್ ನ ಹಾಟ್ ಸ್ಪಾಟ್. ಆದ್ರೆ ಇಂದು ಆ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಇಲ್ಲ, ಬೆರಳೆಣಿಕೆ ವಾಹನಗಳು ಬಂದ್ರು ವೇಗವಾಗಿ ಹೋಗೋ ಆಗಿಲ್ಲ .ಕಾರಣ ಪೊಲೀಸ್ ಚೆಕ್ ಪಾಯಿಂಟ್.
ಹೌದು. ಬೆಳ್ಳಂ ಬೆಳಿಗ್ಗೆಯಿಂದ ನಗರದಾದ್ಯಂತ ವೆಹಿಕಲ್ ಚೆಕ್ಕಿಂಗ್ ನಡೀತಿದೆ. ನಗರದ ನೃಪತುಂಗ ರಸ್ತೆಯಲ್ಲೂ ಪೊಲೀಸ್ರು ಲಾಠಿ ಹಿಡಿದು ತಪಾಸಣೆ ನಡೆಸ್ತಿದ್ದಾರೆ. ಸೂಕ್ತ ಮಾಹಿತಿ ಹಾಗೂ ಕಾರಣ ಕೊಟ್ರೆ ಅಷ್ಟೇ ವೆಹಿಕಲ್ ಮುಂದೆ ಬಿಡ್ತಿರೋ ಪೊಲೀಸ್ರು, ಸುಖಸುಮ್ಮನೆ ಓಡಾಡೋರ ವೆಹಿಕಲ್ ನ ಆನ್ ದಿ ಸ್ಪಾಟ್ ಸೀಜ್ ಮಾಡ್ತಿದ್ದಾರೆ.
PublicNext
08/01/2022 11:36 am