ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಾಲೆಗೆ ಹೋಗುವ ಮೊದಲೇ ಐಸಿಯು ಸೇರಿದ ಬಾಲಕ: ವಿಧಿಯ ಆಟ ಬಲ್ಲವರಾರು?

PublicNext Exclusive

ಬೆಂಗಳೂರು: ಕೊರೋನಾ ನಂತರ ಮಕ್ಕಳಿಗೆ ಈಗಷ್ಟೇ ಶಾಲೆ ಆರಂಭಗೊಂಡಿದೆ. ಈ ಪುಟ್ಟ ಪೋರ ನಾಳೆಯಿಂದ ಶಾಲೆಗೆ ಹೋಗಲು ಬುಕ್ಸ್, ಜಾಮಿಟ್ರಿ ಬಾಕ್ಸ್ ಕೊಳ್ಳಲು ತನ್ನ ತಾಯಿಯ ಜೊತೆ ಹೊರಗೆ ಬಂದಿದ್ದ. ಆದರೆ ವಿಧಿಯ ಆಟವೇ ಬೇರೆಯಾಗಿತ್ತು.

ತಾಯಿಯ ಜೊತೆ ಶಾಪಿಂಗ್ ಮುಗಿಸಿ ತರಕಾರಿ ಕೊಳ್ಳುವ ವೇಳೆ ಏಕಾಏಕಿ ಆಲದ ಮರದ ರೆಂಬೆ ಮುರಿದು ಇವರ ಮೇಲೆ ಬಿದ್ದಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಐದು ವರ್ಷದ ಬಾಲಕ ದಕ್ಷಿತ್ ನನ್ನು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು.

ಈ ಘಟನೆ ಇದೇ ತಿಂಗಳಿನ 4ನೇ ತಾರೀಕಿನಂದು ಬಿಟಿಎಂ ಲೇಔಟ್ ತಾವರೆಕೆರೆ ಸರ್ಕಲ್ ಬಳಿ ನಡೆದಿತ್ತು. ಈಗ ದಕ್ಷಿತ್ ಸ್ಥಿತಿ ಹೇಗಿದೆ ಅಂತ ಪಬ್ಲಿಕ್ ನೆಕ್ಸ್ಟ್ ನ ಜೊತೆ ಬಾಲಕನ ತಂದೆ ಮಂಜುನಾಥ್ ಮಾತನಾಡಿದ್ದಾರೆ.

ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.

Edited By : Nagesh Gaonkar
PublicNext

PublicNext

13/07/2022 07:07 pm

Cinque Terre

38.52 K

Cinque Terre

0

ಸಂಬಂಧಿತ ಸುದ್ದಿ