ಆನೇಕಲ್: ಇಂದು ಬಹುತೇಕರು ಶೀತ, ಜ್ವರ, ಕೆಮ್ಮಿನಿಂದ ಬಳಲುತ್ತಿದ್ದಾರೆ. ಇದ್ರಿಂದ ದೊಡ್ಡ ಆಸ್ಪತ್ರೆಗಳಿಗೆ ಏನು ಹೋಗೋದು ಅಂತ ಕ್ಲಿನಿಕ್ ನಲ್ಲಿಯೇ ಚಿಕಿತ್ಸೆ ಪಡೆದುಕೊಳ್ತಾರೆ. ಆದ್ರೆ, ಇಲ್ಲಿ 18 ವರ್ಷದ ಯುವಕನೊಬ್ಬ ಕ್ಲಿನಿಕ್ ಚಿಕಿತ್ಸೆಗೆಂದು ಹೋಗಿ ಇದೀಗ ಎದ್ದು, ನಡೆದಾಡೋದಕ್ಕೂ ಸಹ ಆಗದಂತಾಗಿದೆ. ಡಾಕ್ಟರ್ ನ ಆ ಒಂದು ಯಡವಟ್ಟಿನಿಂದ ಇಡೀ ಕುಟುಂಬವೇ ಬೀದಿಪಾಲಾಗಿದೆ!
ಯುವಕನ ದುಡಿಮೆಯನ್ನೇ ನಂಬಿ ಕುಟುಂಬ ಬದುಕುತ್ತಿತ್ತು. ಹೋಟೆಲ್ ನಲ್ಲಿ ಕೆಲಸ ಮಾಡಿ ಇಡೀ ಕುಟುಂಬವನ್ನೇ ಸಾಕುತ್ತಿದ್ದ ಆ ಪರಿಶ್ರಮಿ. ಜ್ವರ ಅಂತ ಕ್ಲಿನಿಕ್ ಗೆ ಹೋದವನನ್ನು ಶಾಶ್ವತವಾಗಿ ಇದೀಗ ಡಾಕ್ಟರ್ ಮಲಗಿಸಿದ್ದಾರೆ. ಈ ನತದೃಷ್ಟನ ಹೆಸರು ಅಭಿ. ಜ.6ರಂದು ಎಲೆಕ್ಟ್ರಾನಿಕ್ ಸಿಟಿಯ ಸಾಸ್ಸಿಯಾ ಕ್ಲಿನಿಕ್ ಗೆ ಹೋಗಿದ್ದ ಅಭಿಗೆ ಜ್ವರ ಇದೆ ಅಂತ ಹೇಳಿ ಡಾ.ಅಶೋಕ್ ಕೊಟ್ಟ ಆ ಇಂಜೆಕ್ಷನ್ ಇದೀಗ ಅಭಿ ಬಾಳಿಗೆ ಕೊಳ್ಳಿ ಇಟ್ಟಿದೆ!
ಕೆಲ ದಿನಗಳ ಬಳಿಕ ಇಂಜೆಕ್ಷನ್ ನೀಡಿದ ಜಾಗದಲ್ಲಿ ಉರಿ ಹೆಚ್ಚಾಗಿದೆ ಎಂದು ಮತ್ತದೇ ಕ್ಲಿನಿಕ್ ಗೆ ಹೋಗ್ತಾರೆ. ಈ ವೇಳೆ ಡಾ.ಅಶೋಕ್ ಅಲ್ಲಿರಲಿಲ್ಲ! ಕ್ಲಿನಿಕ್ ಮಾಲೀಕ ಆರೋಗ್ಯಸ್ವಾಮಿ ತಮ್ಮ ಕ್ಲಿನಿಕ್ ನ ತಪ್ಪು ಒಪ್ಪಿಕೊಂಡು, ಮುಂದಿನ ಚಿಕಿತ್ಸೆ ಕೊಡೋದಾಗಿ ತಿಳಿಸಿದ್ದರು. ನಂತರ ಜಿಗಣಿಯ ವಿಜಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಕೋವಿಡ್ ಪಾಸಿಟವ್ ಅಂತ ಗೊತ್ತಾಗಿದೆ. ಜೊತೆಗೆ ಕಿಡ್ನಿ- ಲಿವರ್ ಡ್ಯಾಮೇಜ್ ಕೂಡ ಆಗಿದೆ.
ಸಾಲದ್ದಕ್ಕೆ ಕಾಲು- ಬೆನ್ನಿನ ಕೆಳಭಾಗದಲ್ಲಿ ಫುಲ್ ಇನ್ಫೆಕ್ಷನ್ ಕಂಡು ಬಂದಿದೆ. ಈಗ ಯುವಕನ ಕಾಲು ತೆಗೆದ್ರೂ ಬೆನ್ನಿನ ಕೆಳಗಿನ ಗಾಯ ವಾಸಿಯಾಗೋದು ಡೌಟ್ ಅಂತಿದ್ದಾರೆ ವೈದ್ಯರು. ಮಗನ ಜೀವ ಉಳಿಸಿಕೊಡಿ ಅಂತ ತಾಯಿ ಶಶಿಕಲಾ ಗೋಳಾಡುತ್ತಾ, ಅಲೆದಾಡುತ್ತಿದ್ದು, ಠಾಣೆಗೆ ದೂರು ನೀಡಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ವೈದ್ಯ ಹಾಗೂ ಕ್ಲಿನಿಕ್ ಮಾಲೀಕ ನಾಪತ್ತೆಯಾಗಿದ್ದಾರೆ.
PublicNext
28/01/2022 10:00 am