ವರದಿ- ಗೀತಾಂಜಲಿ
ಬೆಂಗಳೂರು: ಕೇಂದ್ರ ಸರ್ಕಾರದ 75 ದಿನಗಳ ವಿಶೇಷ ಯೋಜನೆಯಡಿ ಉಚಿತವಾಗಿ ವ್ಯಾಕ್ಸಿನ್ ನೀಡಲಾಗ್ತಿದೆ.ಹೀಗಾಗಿ ಜನರು ಖಾಸಗಿ ಆಸ್ಪತ್ರೆ ವ್ಯಾಕ್ಸಿನ್ ಸೆಂಟರ್ ಬಿಟ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಹಾಕಿಸಿಕೊಳ್ತಿರುವುದರಿಂದ ಖಾಸಗಿ ಆಸ್ಪತ್ರೆಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಕೇಂದ್ರ ಸರ್ಕಾರ ಜನರಿಗೆ ಅನುಕೂಲವಾಗ್ಲಿ ಎಲ್ಲ ವಯೋಮಾನದವರಿಗೂ ಲಸಿಕೆ ಸಿಗ್ಲಿ ಅಂತಾ ಉಚಿತವಾಗಿ ಲಸಿಕೆ ನೀಡಲು ಪ್ರಾರಂಭಿಸಿದ್ದಾರೆ.
ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಸೆಂಟರ್ ಗಳಲ್ಲಿ ಲಸಿಕೆ ಕೊಡಲಾಗ್ತಿದೆ. ಹೀಗಾಗಿ ಯಾರು ಹಣಕೊಟ್ಟು ಲಸಿಕೆಯನ್ನು ಹಾಕಿಸಿಕೊಳ್ಳುತ್ತಾರೆ ಎಂದು ಎಷ್ಟೋ ಜನರು ಉಚಿತವಾಗಿ ಹಾಕ್ತಿರುವ ಸರ್ಕಾರಿ ಆಸ್ಪತ್ರೆ ಕಡೆಗೆ ಮುಖ ಮಾಡುತ್ತಿದ್ದಾರೆ. ಹೀಗಾಗಿ ಇದು ಖಾಸಗಿ ಆಸ್ಪತ್ರೆಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಖಾಸಗಿ ಆಸ್ಪತ್ರೆಗಳಲ್ಲಿ ಬೂಸ್ಟರ್ ಡೋಸ್ ಹಣ ತೆಗೆದುಕೊಂಡು ಹಾಕ್ತಿದ್ರು.ಆದ್ರೆ ಇದ್ದವರು ಹೇಗೋ ಹಣ ಕೊಟ್ಟು ಲಸಿಕೆ ಹಾಕಿಸಿಕೊಳ್ಳುತ್ತಿದ್ರು. ಇಲ್ಲದವರು ಲಸಿಕೆ ಹಾಕಿಸಿಕೊಳ್ಳಲು ಇಷ್ಟುದಿನ ಮೀನಾಮೇಷ ಏಣಿಸುತ್ತಿದ್ರು. ಈಗ ಉಚಿತವಾಗಿ ಬೂಸ್ಟರ್ ಡೋಸ್ ನೀಡ್ತಿರುವುದು ಕೆಳವರ್ಗದ ಜನರಿಗೆ ಬಹಳ ಅನುಕೂಲವಾದಂತಗಿದೆ.
ಇನ್ನು ಖಾಸಗಿ ಆಸ್ಪತ್ರೆಯವರು ಇರುವಂತಹ ಲಸಿಕೆಯನ್ನ ಎಷ್ಟು ದಿನ ಅಂತಾ ಸ್ಟಾಕ್ ಇಟ್ಟು ಕೊಳ್ಳುವುದೆಂದು ಚಿಂತಿಸುತ್ತಿದ್ದಾರೆ. ಅಷ್ಟೆ ಅಲ್ಲದೇ ತುಂಬ ದಿನ ಲಸಿಕೆ ಸ್ಟೋರ್ ಮಾಡಿ ಇಡಲು ಸಾಧ್ಯವಿಲ್ಲ.ಆಸ್ಪತ್ರೆಯಲ್ಲಿ ಶೇಖರಣೆ ಮಾಡಿಟ್ಟ ವ್ಯಾಕ್ಸಿನ್ ಜನರು ಹಾಕಿಸಿಕೊಂಡಿಲ್ಲ ಅಂದ್ರೆ ವ್ಯರ್ಥವಾಗಲಿದೆ ಎಂದು ಖಾಸಗಿ ಆಸ್ಪತ್ರೆಯವರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.ಅಷ್ಟೇ ಅಲ್ಲದೇ ಸರ್ಕಾರದ ನಿರ್ಧಾರದಿಂದ ಖಾಸಗಿ ಆಸ್ಪತ್ರೆಗಳು ಇಕ್ಕಟ್ಟಿಗೆ ಸಿಲುಕುವಂತಾಗಿದೆ.
Kshetra Samachara
17/07/2022 11:55 am