ಬೆಂಗಳೂರು : ರಾಜ್ಯದ ಜನರೇ ಎಚ್ಚರ ಎಚ್ಚರ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಇಲ್ಲವೆಂದರೆ ಜೇಬಿಗೆ ಕತ್ತರಿ ಬೀಳೊದು ಫಿಕ್ಸ್. ರಾಜ್ಯದಲ್ಲಿ ಪೆಟ್ರೋಲ್, ಗ್ಯಾಸ್, ಕರೆಂಟ್ ದರ ಏರಿಕೆಯ ಬಳಿಕ ಈಗ ಮತ್ತೊಂದು ಶಾಕ್ ನೀಡಲು ಸರ್ಕಾರ ಮುಂದಾಗಿದ್ದು, ಕೊರೊನಾ ಚಿಕಿತ್ಸಾ ದರ ಏರಿಕೆ ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ. ಹಾಗಾಗಿ ಇನ್ಮುಂದೆ ನಿಮ್ಮ ಆರೋಗ್ಯ ಚಿಕಿತ್ಸಾ ವೆಚ್ಚವು ಹೆಚ್ಚಾಗಲಿದೆ. ಕೊರೊನಾ ಒಕ್ಕರಿಸಿದರೆ ಮತ್ತೆ ಜೇಬಿಗೆ ಕತ್ತರಿ ಬೀಳೊದು ಫಿಕ್ಸ್. ಖಾಸಗಿ ಆಸ್ಪತ್ರೆಗಳಿಗೆ ಲಾಭ ಮಾಡಲು ಜನರ ಕಣ್ಣೀರು ಹಾಕಿಸಲು ಆರೋಗ್ಯ ಇಲಾಖೆ ಮುಂದಾಯ್ತಾ ಎನ್ನುವ ಪ್ರಶ್ನೆಗಳು ಉಂಟಾಗಿವೆ.
ಕೊರೊನಾ ಚಿಕಿತ್ಸಾ ದರ ಏರಿಕೆ ವಿಚಾರವಾಗಿ ಖಾಸಗಿ ಆಸ್ಪತ್ರೆಗಳು ಹಲವು ಬೇಡಿಕೆಗಳನ್ನು ಆರೋಗ್ಯ ಇಲಾಖೆ ಮುಂದಿಟ್ಟಿವೆ. ಕೊವಿಡ್ ಚಿಕಿತ್ಸಾ ವೆಚ್ಚವನ್ನ ಹೆಚ್ಚಳದ ಜೊತೆ ಇತರೆ ಹಲವು 70ಕ್ಕೂ ಹೆಚ್ಚು ಚಿಕಿತ್ಸೆಗಳ ದರಗಳ ಏರಿಕೆಗೂ ಪಟ್ಟು ಹಿಡಿಯಲಾಗಿದೆ. ಕೊವಿಡ್ ಚಿಕಿತ್ಸೆ ಕೊಡಲು ಮೆಡಿಸಿನ್ ದರ ಸೇರಿದಂತೆ ಬೇರೆ ಬೇರೆಯ ಖರ್ಚು ಹೆಚ್ಚಾಗಿದೆ. ಮೆಡಿಸಿನ್ ದರ ಏರಿಕೆಯ ಎಫೆಕ್ಟ್ ಆಸ್ಪತ್ರೆಗೆ ತಟ್ಟುತ್ತಿದೆ.
ಹೀಗಾಗಿ ಕೊವಿಡ್ ಚಿಕಿತ್ಸೆಯ ವೆಚ್ಚ ಹೆಚ್ಚಳ ಮಾಡುವಂತೆ ಖಾಸಗಿ ಆಸ್ಪತ್ರೆಗಳ ಆರೋಗ್ಯ ಇಲಾಖೆಗೆ ಡಿಮ್ಯಾಂಡ್ ಮಾಡಿವೆ. ಕೊವಿಡ್ ಚಿಕಿತ್ಸಾ ದರ ಪರಿಷ್ಕರಣೆಯ ಬೇಡಿಕೆಯ ಜೊತೆ ಇತರೆ ಕೆಲವು ಚಿಕಿತ್ಸಾ ದರ ಏರಿಕೆಗೂ ಬೇಡಿಕೆಯಿಟ್ಟಿವೆ. ದರ ಪರಿಷ್ಕರಣೆ ಆದರೆ ಚಿಕಿತ್ಸೆ ಕೊಡೋದಕ್ಕೆ ನೆರವಾಗುತ್ತದೆ. ಇಲ್ಲವಾದರೆ ಖಾಸಗಿ ಆಸ್ಪತ್ರೆಗಳಿಗೆ ಸಮಸ್ಯೆಯಾಗುತ್ತೆ ಅಂತಾ ಬೇಡಿಕೆ ಇಟ್ಟಿವೆ. ಹೀಗಾಗಿ ಖಾಸಗಿ ಆಸ್ಪತ್ರೆಗಳ ಚಿಕಿತ್ಸಾ ವೆಚ್ಚ ಏರಿಕೆಯ ವಿಚಾರವಾಗಿ ಇಲಾಖೆ ಒಂದು ಸಮಿತಿ ರಚನೆ ಮಾಡಿದೆ. ತಜ್ಞರ ವರದಿ ಪಡೆದು ಕೊವಿಡ್ ಚಿಕಿತ್ಸಾ ವೆಚ್ಚ ಮರು ಪರಿಷ್ಕರಣೆಯ ಬಗ್ಗೆ ನಿರ್ಣಯ ಕೈಗೊಳ್ಳಲು ಮುಂದಾಗಿದೆ.
PublicNext
06/07/2022 06:05 pm