ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಾಸ್ಕ್‌ ಮರೆತ ಜನ- ಅಧಿಕಾರಿಗಳ ಮಾತಿಗೆ ಕಿಮ್ಮತ್ತೇ ಇಲ್ವಾ?

ಬೆಂಗಳೂರು: ಕೋವಿಡ್ ನಾಲ್ಕನೇ ಅಲೆ ಆತಂಕ ಹಿನ್ನೆಲೆ ರಾಜ್ಯ ಸರ್ಕಾರ ಮಾಸ್ಕ್ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದರೂ, ರಾಜಧಾನಿ ಬೆಂಗಳೂರಿನಲ್ಲಿ ಜನರು ನಿರ್ಲಕ್ಷ್ಯ ತೋರುತ್ತಿದ್ದು ಕೊರೊನಾ ಸೋಂಕಿಗೆ ಆಹ್ವಾನ ನೀಡುತ್ತಿದ್ದಾರೆ.

ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ ಸೇರಿದಂತೆ ಸಾರ್ವಜನಿಕ ಪ್ರದೇಶಗಳಿಗೆ ಜನರು ಮಾಸ್ಕ್‌ ಧರಿಸದೇ ತೆರಳುತ್ತಿದ್ದಾರೆ. ನಗರದ ವ್ಯಾಪಾರ ವಹಿವಾಟು ಕೇಂದ್ರಗಳಲ್ಲಿ ಗ್ರಾಹಕರು, ವ್ಯಾಪಾರಿಗಳು ಮುಖಗವಸು ಧರಿಸುತ್ತಿಲ್ಲ. ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಓಡಾಡುವ ಜನರು ಕೂಡ ಯಾವುದೇ ಸುರಕ್ಷತಾ ಕ್ರಮ ಅನುಸರಿಸುತ್ತಿಲ್ಲ. ಖಾಸಗಿ ಬಸ್‌ಗಳಲ್ಲಿ ಗುಂಪು ಗುಂಪಾಗಿ ಪ್ರಯಾಣಿಕರನ್ನು ತುಂಬಿಕೊಂಡು ತೆರಳುತ್ತಿದ್ದಾರೆ. ಹೀಗಾಗಿ ಸೋಂಕು ಭೀತಿ ಮತ್ತೆ ಹೆಚ್ಚಳವಾಗುತ್ತಿದೆ.

ವಾರದ ಹಿಂದಷ್ಟೇ ದಿನಕ್ಕೆ ಬೆರಳೆಣಿಕೆಯಷ್ಟು ಜನರಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಆದರೆ ಈಗ ಅದರ ಸಂಖ್ಯೆ ಮೂರಂಕಿ ದಾಟುತ್ತಿದೆ. ಜನರು ಕೋವಿಡ್‌ ಸುರಕ್ಷತಾ ನಿಯಮ ಪಾಲನೆ ಮಾಡದಿರುವುದೇ ಇದಕ್ಕೆ ಕಾರಣ ಎಂದು ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಬಸ್‌ಗಳಲ್ಲಿ ನಿರ್ವಾಹಕರು ಕೂಡ ಮಾಸ್ಕ್‌ ಧರಿಸುತ್ತಿಲ್ಲ. ವಿದ್ಯಾರ್ಥಿಗಳು ಕೂಡ ಮಾಸ್ಕ್‌ ಧರಿಸದೇ ಶಾಲಾ–ಕಾಲೇಜಿಗೆ ತೆರಳುತ್ತಿದ್ದಾರೆ. ಜನರಲ್ಲಿ ಭಯವೇ ಇಲ್ಲವಾಗಿದೆ. ಇದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಹಿರಿಯ ವೈದ್ಯರು ಎಚ್ಚರಿಸಿದರು.

ಇನ್ನೂ, ನಗರದ ಎಲ್ಲೆಡೆ ಮೊದಲಿನಂತೆಯೇ ಮದುವೆ, ಬೀಗರೂಟಗಳ ಕಾರುಬಾರು ಜೋರಾಗಿದೆ. ಎಲ್ಲಾ ಕಲ್ಯಾಣ ಮಂಟಪ, ಸಮುದಾಯಭವನಗಳನ್ನು ಕಾಯ್ದಿರಿಸಿದ್ದು ಅದ್ಧೂರಿ ಸಮಾರಂಭ ನಡೆಸುತ್ತಿದ್ದಾರೆ. ಮಕ್ಕಳು, ವೃದ್ಧರು ಕೂಡ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ಮದುವೆಗಳಿಗೆ ತೆರಳುತ್ತಿದ್ದಾರೆ. ಧಾರ್ಮಿಕ ಉತ್ಸವ, ಜಾತ್ರೆಗಳು ಕೂಡ ನಡೆಯುತ್ತಿವೆ. ಇದೂ ಕೂಡ ರೋಗಿಗಳ ಸಂಖ್ಯೆ ಹೆಚ್ಚಾಗುವ ಕಾರಣಗಳಲ್ಲಿ ಒಂದಾಗಿದೆ.

ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕ ಚಂದ್ರ ಟೆಸ್ಟಿಂಗ್ ಹೆಚ್ಚಳ ಮಾಡಿದ್ದೇವೆ. ಹೊಸತಳಿ ಯಾವುದು ಬೆಂಗಳೂರು ಪತ್ತೆ ಆಗಿಲ್ಲ. ಎಲ್ಲರೂ ಕೊವೀಡ್ ನಿಯಮ ಪಾಲನೆ ಮಾಡಲೇಬೇಕು ಅಂತಾ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

26/04/2022 04:23 pm

Cinque Terre

30.13 K

Cinque Terre

0

ಸಂಬಂಧಿತ ಸುದ್ದಿ