ವರದಿ: ಗಣೇಶ್ ಹೆಗಡೆ
ಬೆಂಗಳೂರು: ರಾಜಧಾನಿ ಬೆಂಗಳೂರಿನ ಗಡಿ ಭಾಗಗಳಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಹೊರ ರಾಜ್ಯದಿಂದ ಬರುವ ವಾಹನ ಸವಾರರ ತಪಾಸಣೆ ಜೊತೆಗೆ ಸಾಮಾಜಿಕ ಅಂತರದ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಅದೇ ರೀತಿ ಕೈಗಾರಿಕಾ ಪ್ರದೇಶಗಳಲ್ಲಿ ರ್‍ಯಾಂಡಮ್ ಆಗಿ ಕೊರೊನಾ ಟೆಸ್ಟಿಂಗ್ ನಡೆಸಲು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್ ಸೂಚನೆ ನೀಡಿದ್ದಾರೆ.
ಕೊರೊನಾ ನಾಲ್ಕನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಸರ್ಕಾರ ಮತ್ತೆ ಟೆಸ್ಟಿಂಗ್ ಟ್ರೇಸಿಂಗ್ ಟ್ರೀಟ್ಮೆಂಟ್ ಮೊರೆ ಹೋಗಿದೆ. ಬೆಂಗಳೂರು ನಗರದಲ್ಲಿ ಟೆಸ್ಟಿಂಗ್ ಪ್ರಮಾಣ ಹೆಚ್ಚಳ ಮಾಡಲು ಸೂಚನೆ ನೀಡಲಾಗಿದೆ. ಒಂದನೇ ಅಲೆ ಹಾಗೂ ಎರಡನೇ ಅಲೆಯ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟೆಸ್ಟ್ ಗಳನ್ನು ಮಾಡಲಾಗುತ್ತಿತ್ತು, ಆದರೆ ಮೂರನೆ ಅಲೆಯ ಕೇಸ್‌ಗಳು ಕಡಿಮೆಯಾದ ಹಿನ್ನೆಲೆ ಟೆಸ್ಟಿಂಗ್ ಸಂಖ್ಯೆ ಕಡಿಮೆಗೊಳಿಸಲಾಗಿತ್ತು. ಇದೀಗ ಆದ್ರೀಗ ಮತ್ತೆ ರ್‍ಯಾಂಡಮ್ ಟೆಸ್ಟಿಂಗ್ ಮೊರೆ ಹೋಗಲಾಗಿದೆ.
ಬೆಂಗಳೂರು ನಗರ ಜಿಲ್ಲೆಯ 36 ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಲ್ಲಿ ಟೆಸ್ಟಿಂಗ್ ನಡೆಸಲು ಸೂಚನೆ ನೀಡಲಾಗಿದೆ. ಮೂರು ತಾಲೂಕು ಆಸ್ಪತ್ರೆ, ಮೂರು ಪಿಹೆಚ್‌ಸಿಗಳಲ್ಲಿಯೂ ಟೆಸ್ಟಿಂಗ್ ಹೆಚ್ಚಿಸಲು ಸೂಚನೆ ನೀಡಲಾಗಿದೆ. ಬೇರೆ ರಾಜ್ಯಗಳಿಂದ ಬರುವವರ ಮೇಲೆ ಜಿಲ್ಲಾಡಳಿತದ ಕಣ್ಣಿಟ್ಟಿದೆ. ಇನ್ನು ಬಸ್ ನಿಲ್ದಾಣ ಹಾಗೂ ರೈಲ್ವೆ ನಿಲ್ದಾಣಗಳಲ್ಲಿಯೂ ರ್‍ಯಾಂಡಮ್ ಟೆಸ್ಟಿಂಗ್ ನಡೆಯಲಿದೆ. ಜೊತೆಗೆ ಪೀಣ್ಯ ಇಂಡಸ್ಟ್ರಿ, ಅತ್ತಿಬೆಲೆ ಇಂಡಸ್ಟ್ರಿ ಕಾರ್ಮಿಕರಿಗೆ ರ್‍ಯಾಂಡಮ್ ಕೋರೊನಾ ಟೆಸ್ಟ್ ನಡೆಸಲು ಸೂಚನೆ ನೀಡಲಾಗಿದೆ.
PublicNext
28/04/2022 07:33 pm