ವರದಿ: ಗಣೇಶ್ ಹೆಗಡೆ
ಬೆಂಗಳೂರು: ದೇಶದಲ್ಲಿ ರೂಪಾಂತರಿ ವೈರಾಣು ಒಮಿಕ್ರಾನ್ ಹೆಚ್ಚಳ ವಾಗುತ್ತಿದೆ. ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ವಾಗದಂತೆ ಹೊಸ ವರ್ಷ ಆಚರಣೆಗೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಕೊವೀಡ್ ಕುರಿತು ರಚನೆಗೊಂಡ ತಾಂತ್ರಿಕ ಸಲಹಾ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ನಿನ್ನೆ ಈ ಕುರಿತು ಸಲಹಾ ಸಮಿತಿ ಸಭೆ ನಡೆಸಿತ್ತು. ಆ ಸಂದರ್ಭ ದಲ್ಲಿ ಡಿಸೆಂಬರ್ 22 ರಿಂದ ಜನವರಿ 2 ವರೆಗೆ ಮಾರ್ಗಸೂಚಿ ಬಿಡುಗಡೆಗೆ ಸರ್ಕಾರಕ್ಕೆ ಸಲಹೆ ನೀಡಿದೆ.
ಏನಿರಲಿದೆ ಪಾಲಿಕೆ ಮಾರ್ಗಸೂಚಿ..?
- ಡಿಸೆಂಬರ್ 22 ರಿಂದ ಜನವರಿ 02 ರವರೆಗೆ ಜಾರಿಯಾಗಲಿರೋ ಟಫ್ ರೂಲ್ಸ್...?
- ಹೊಸ ವರ್ಷದ ಆಚರಣೆ ಒಳಾಂಗಣ ಹಾಗೂ ಹೊರಾಂಗಣ ಸೆಲೆಬ್ರೇಷನ್ ಗೆ ಮಾರ್ಗಸೂಚಿ
- ದೇವಸ್ಥಾನ, ಚರ್ಚ್, ಮಸೀದಿಗೂ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡುವಂತೆ ಸಲಹೆ
- ಹೆಚ್ಚು ಜನದಟ್ಟಣೆ ತಡೆಯುವ ನಿಟ್ಟಿನಲ್ಲಿ ಎರಡು ವಾರ ಮಾರ್ಗಸೂಚಿ ಹೊರಡಿಸಲು ಸಲಹೆ
- ದೇವಸ್ಥಾನಕ್ಕೆ ಆಗಮಿಸುವವರಿಗೆ ಎರಡು ಡೋಸ್ ವ್ಯಾಕ್ಸಿನ್ ಕಡ್ಡಾಯ
- ಪಬ್ ಕ್ಲಬ್ ಗಳಲ್ಲಿ ಕೇವಲ 50 ಮಂದಿಗೆ ಮಾತ್ರ ಅವಕಾಶ
- ಪಬ್ ಗೆ ಬರುವ ಗ್ರಾಹಕರು ಎರಡು ಡೋಸ್ ವ್ಯಾಕ್ಸಿನ್ ಪಡೆದಿರಬೇಕು
- ಹೊರಾಂಗಣ ಪ್ರದೇಶದಲ್ಲಿ 3.5 ಚದರ ಮೀಟರ್ ನಲ್ಲಿ 200-300 ಜನರಿಗೆ ಸೀಮಿತಗೊಳಿಸುವುದು
- ದೇಗುಲ, ಚರ್ಚ್, ಮಸೀದಿಗಳಲ್ಲಿ ಅಂತರ ಕಾಪಾಡಿಕೊಳ್ಳಲು ಮಾರ್ಷಲ್ ಗಳ ನಿಯೋಜನೆ
Kshetra Samachara
16/12/2021 02:12 pm