ವರದಿ - ಗಣೇಶ ಹೆಗಡೆ
ಬೆಂಗಳೂರು: 'ಒಮಿಕ್ರಾನ್' ನಗರಕ್ಕೆ ಕಾಲಿಡದಂತೆ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿರುವ ಬಿಬಿಎಂಪಿ ಇದುವರೆಗೂ ಕೊರೊನಾ ಲಸಿಕೆ ಪಡೆಯದವರನ್ನು ಪತ್ತೆ ಹಚ್ಚಿ ವ್ಯಾಕ್ಸಿನ್ ಹಾಕಿಸುವತ್ತ ಚಿತ್ತ ಹರಿಸಿದೆ.
ಕೆಲವರು ಲಸಿಕೆ ಹಾಕಿಸಿಕೊಳ್ಳಲು ಇನ್ನೂ ಮನಸ್ಸು ಮಾಡಿಲ್ಲ. ಅಂತವ ರಿಗೆ ಪಾಠ ಕಲಿಸುವ ಉದ್ದೇಶದಿಂದ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಎಂಬ ನೀತಿ ಜಾರಿಗೆ ತರಲು ನಾವು ತೀರ್ಮಾ ನಿಸಿದ್ದೇವೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಬಾಲ ಸುಂದರ್ ತಿಳಿಸಿದ್ದಾರೆ.
ಈ ಕುರಿತಂತೆ ನಾವು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರ ಮೂಲಕ ಆರೋಗ್ಯ ಇಲಾಖೆಗೆ ಮನವಿ ಮಾಡಿಕೊಂಡಿದ್ದೇವೆ. ನಮ್ಮ ಮನವಿಗೆ ಗ್ರೀನ್ ಸಿಗ್ನಲ್ ಸಿಕ್ಕ ಕೂಡಲೇ ನಾವು ಎರಡು ಡೋಸ್ ಲಸಿಕೆ ಪಡೆದವರು ಮಾತ್ರ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ಎಂಬ ನೀತಿ ಜಾರಿಗೆ ತರುತ್ತೇವೆ ಎಂದರು.
ಇನ್ನು Bmtc, KSRTC , Metro Train ಸೇರಿದಂತೆ ಮಾಲ್ ಗಳಿಗೆ ಹೋಗಬೇಕಾದ್ರೆ 2ನೇ ಡೋಸ್ ಲಸಿಕೆ ಕಡ್ಡಾಯವೆಂದು ಬಿಬಿಎಂಪಿ ಪ್ಲಾನ್ ಮಾಡಿಕೊಂಡಿತ್ತು.=ಸಾರ್ವಜನಿಕ ಸ್ಥಳಗಳ ಪ್ರವೇಶಕ್ಕೆ 2ನೇ ಡೋಸ್ ಕಡ್ಡಾಯದ ಬಗ್ಗೆ ಬಿಬಿಎಂಪಿ ಮುಂದಾಗಿರೋ ಕುರಿತು 'ಪಬ್ಲಿಕ್ ನೆಕ್ಸ್ಟ್' ನಿನ್ನೆ ವರದಿ ಮಾಡಿತ್ತು.
Kshetra Samachara
01/12/2021 02:48 pm