ಬೆಂಗಳೂರು : ಹೆಮ್ಮಾರಿ ಸೋಂಕು ಕೊರೊನಾದಿಂದ ಕಂಗೆಟ್ಟ ಜನಕ್ಕೆ ಇದೀಗ ಹೊಸ ವೈರಸ್ ಭೀತಿ ಹೆಚ್ಚಾಗಿದೆ. ಇದರ ಬೆನ್ನಲ್ಲೇ ಗಡಿ, ಹಾಗೂ ವಿದೇಶ ಪ್ರಯಾಣದ ಮೇಲೆ ನಿಗಾ ವಹಿಸಿರುವ ಸರ್ಕಾರ ಕೋವಿಡ್ ಹೆಚ್ಚಿರುವ ದೇಶಗಳಿಂದ ಬರುವ ಪ್ರಯಾಣಿಕರಿಗೆ 7 ದಿನಗಳ ಕ್ವಾರಂಟೈನ್ ಕಡ್ಡಾಯಗೊಳಿಸದೆ.
ಇನ್ನು ಪ್ರಯಾಣಿಕರ ಕೋವಿಡ್ ವರದಿ ನೆಗೆಟಿವ್ ಇದ್ದರು ಕ್ವಾರಂಟೈನ್ ಕಡ್ಡಾಯಗೊಳಿಸಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಿಹೆಚ್ ಒ ತಿಪ್ಪೇಸ್ವಾಮಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ್ದಾರೆ. ಡಿಹೆಚ್ ಒ ತಿಪ್ಪೇಸ್ವಾಮಿ, ಹೈ ರಿಸ್ಕ್ ದೇಶಗಳಿಂದ ಬರುವ ಪ್ರಯಾಣಿಕರ ವ್ಯಾಕ್ಸಿನ್ ಮತ್ತು ನೆಗೆಟಿವ್ ರಿಪೋರ್ಟ್ ಕಡ್ಡಾಯವಾಗಿ ಚೆಕ್ ಮಾಡುತ್ತೇವೆ ಎಂದಿದ್ದಾರೆ.
ಕೊರೊನಾ ರೂಪಾಂತರಿ ಒಮಿಕ್ರಾನ್ ಕರ್ನಾಟಕಕ್ಕೆ ಕಂಟಕವಾಗುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿಯೇ ಏರ್ಪೋರ್ಟ್ ಸಿಬ್ಬಂದಿ ಅಲರ್ಟ್ ಆಗಿ ಖಡಕ್ ತಪಾಸಣೆ ನಡೆಸುತ್ತಿದ್ದಾರೆ. ಅದರಲ್ಲೂ ಒಮಿಕ್ರಾನ್ ಅಬ್ಬರ ಹೆಚ್ಚಿರುವ ರಾಷ್ಟ್ರಗಳಿಂದ ಬರುವ ವಿದೇಶಿ ಪ್ರಯಾಣಿಕರ ಮೇಲೆ ವಿಮಾನ ನಿಲ್ದಾಣದಲ್ಲಿ ಹದ್ದಿನ ಕಣ್ಣಿಡಲಾಗಿದೆ ಎಂದು ಹೇಳಿದ್ದಾರೆ.
ನೆಗೆಟಿವ್ ರಿಪೋರ್ಟ್ ಇದ್ದರು ಮತ್ತೊಮ್ಮೆ ಇಲ್ಲಿ ಆರ್ ಟಿಪಿಸಿಆರ್ ಟೆಸ್ಟಿಂಗ್ ಕಡ್ಡಾಯವಾಗಿ ಮಾಡಲಾಗುತ್ತೆ. ಟೆಸ್ಟಿಂಗ್ ನಂತರ ನೆಗೆಟಿವ್ ಬಂದ್ರೆ ಕಡ್ಡಾಯ 7 ದಿನಗಳ ಹೋಂ ಕ್ವಾರಂಟೈನ್ ಮಾಡಲಾಗುತ್ತೆ. 7 ದಿನಗಳ ಕ್ವಾರಂಟೈನ್ ನಂತರ ಆರ್ ಟಿಪಿಸಿಆರ್ ಟೆಸ್ಟ್ ಮಾಡಲಾಗುತ್ತೆ. ಪಾಸಿಟಿವ್ ಬಂದ್ರೆ ನಿಗದಿತ ಆಸ್ವತ್ರೆಯಲ್ಲಿ ಐಸೋಲೇಷನ್ ಮಾಡಲಾಗುತ್ತೆ.
Kshetra Samachara
30/11/2021 03:35 pm