ಬೆಂಗಳೂರು: ಪೋಷಕರಿಗೆ ಕೊರೊನಾ ನಾಲ್ಕನೇ ಅಲೆ ಆತಂಕ ಕಾಡ್ತಿದ್ದು, ಮಕ್ಕಳನ್ನ ಶಾಲೆಗೆ ಹೇಗೆ ಕಳಿಸೋದು ಅಂತಲೇ ಚಿಂತಿಸುತ್ತಿದ್ದಾರೆ. ಪೋಷಕರಂತೆ ಶಾಲಾ ಸಿಬ್ಬಂದಿನೂ ಭಯದಲ್ಲಿಯೇ ಇದೆ.
"ನಾವು ಈಗಾಗ್ಲೆ ಯುನಿಫಾರ್ಮ್ ಕೊಂಡು ಕೊಂಡಿದ್ದೇವೆ. ಫೀಸ್ ಕಟ್ಟಿದ್ದೇವೆ. ನಮ್ಮ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಬೇಡ, ತಡವಾಗಿ ಪ್ರಾರಂಭವಾದ್ರು, ಪರವಾಗಿಲ್ಲ ಶಾಲೆಗೆ ಹೋಗಲಿ ಅಂತ ಕೆಲ ಪೋಷಕರು ಹೇಳಿದ್ರೆ, ಮತ್ತೆ ಕೆಲವು ಜನ ನಮಗೆ ಈ ಕೋವಿಡ್ ಅಂದ್ರೆ ಭಯ, ನಮ್ಮ ಮಕ್ಕಳನ್ನ ಸ್ಕೂಲಿಗೆ ಕಳಿಸುವುದಿಲ್ಲ. ಆನ್ ಲೈನ್ ಕ್ಲಾಸ್ ಅಂತೂ ವೇಸ್ಟ್ ಅನ್ನುತ್ತಿದ್ದಾರೆ.
ಶಾಲೆಗಳು ಈಗ ತಾನೆ ಆರಂಭ ಆಗಿವೆ. ಈಗ ಸಡನ್ ಆಗಿಯೇ ಲಾಕ್ ಡೌನ್ ಅಂದ್ರೆ ನಮಗೂ ಕಷ್ಟವಾಗುತ್ತೆ. ಪೊಷಕರು ಕೂಡ ಆತಂಕ ಪಡಬೇಕಿಲ್ಲ.ನಿಮ್ಮ ಮಕ್ಕಳಿಗೆ ಏನೂ ಆಗುವುದಿಲ್ಲ.ಮಕ್ಕಳನ್ನ ಕಲಿಕೆಯಿಂದ ದೂರ ಮಾಡಬೇಡಿ ಎಂದು ಶಾಲಾ ಪ್ರಿನ್ಸಿಪಾಲರು ಕೇಳಿಕೊಳ್ತಿದ್ದಾರೆ.
ಆದರೆ, ಮೇ-16 ರಿಂದಲೇ ಶಾಲೆ ಆರಂಭವಾಗೋದು ಬಹುತೇಕ ಖಚಿತವಾಗಿಯೇ ಇದೆ. ಶಿಕ್ಷಣ ಸಚಿವರೂ ಈಗಾಗಲೇ ಈ ವಿಷಯ ಹೇಳಿ ಆಗಿದೆ.
PublicNext
27/04/2022 10:29 pm