ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಆಸ್ಪತ್ರೆಯಲ್ಲಿ "ಪುಸ್ತಕ ಓದು ಕನ್ನಡಿಗ" ಕಾರ್ಯಕ್ರಮ!

ಆನೇಕಲ್: ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಆಸ್ಪತ್ರೆಯಲ್ಲಿ ಪುಸ್ತಕ ಓದು ಕನ್ನಡಿಗ ವಿನೂತನ ಕಾರ್ಯಕ್ರಮವನ್ನು ಆನೇಕಲ್ ಪಟ್ಟಣದ ವಿಜಯ ನರ್ಸಿಂಗ್ ಹೋಂ ನಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ ಸಿ ಬಿ ಮೋಹನ್ ನೆರವೇರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ ಸಿ ಬಿ ಮೋಹನ್, ಗುರುವಿನ ಗುಲಾಮನಾಗದ ಹೊರತು ದೊರೆಯದಣ್ಣ ಮುಕುತಿ ಎನ್ನುವ ವಾಕ್ಯವನ್ನು ನಾವು ಬದಲಾಯಿಸಿಕೊಂಡು ಪುಸ್ತಕಗಳನ್ನು ಓದದೆ ಬದುಕಿಗೆ ಅರ್ಥ ದೊರೆಯುವುದಿಲ್ಲ ಎಂದು ಹೇಳಿದರು. ಇಂದಿನ ಯುವ ಪೀಳಿಗೆಗೆ ಕನ್ನಡದ ಅಕ್ಷರಗಳು ಎಷ್ಟು ಎಂಬ ಗೊಂದಲ ಮೂಡಿದೆ ಸರಿಯಾದ ವ್ಯಾಕರಣ ಯಾವುದು ಅಲ್ಪಪ್ರಾಣ-ಮಹಾಪ್ರಾಣವೆಂದು ಗುರುತಿಸಲು ವಿಫಲ ರಾಗುತ್ತಿದ್ದಾರೆ ಎಂದು ನೋವನ್ನು ವ್ಯಕ್ತಪಡಿಸಿದರು

ಖ್ಯಾತ ವಕೀಲರಾದ ಎಚ್ ಶ್ರೀನಿವಾಸ್ ಅವರು ತಮ್ಮ ಆಶಯ ಭಾಷಣವನ್ನು ಮಾತನಾಡುತ್ತಾ ಪುಸ್ತಕವಿಲ್ಲದೇ ಜೀವನವಿಲ್ಲ ತಂತ್ರಜ್ಞಾನ ಎಷ್ಟೇ ಬೆಳೆದರು ಪುಸ್ತಕಕ್ಕೆ ಸಮಾನಾಗಲಾರದು ಎಂದು ಹೇಳಿದರು ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಬಿ ಪಿ ರಮೇಶ್ ವಕೀಲರಾದ ಎಚ್ ಶ್ರೀನಿವಾಸ್ ಬಿ ಪಿ ಮರಿಯಪ್ಪ ಪರಿಷತ್ತಿನ ಅಧ್ಯಕ್ಷರಾದ ಆದೂರು ಪ್ರಕಾಶ್ ಇದ್ದರು

Edited By : PublicNext Desk
Kshetra Samachara

Kshetra Samachara

20/06/2022 02:24 pm

Cinque Terre

1.01 K

Cinque Terre

0

ಸಂಬಂಧಿತ ಸುದ್ದಿ