ವರದಿ: ಮಲ್ಲಿಕ್ ಬೆಳಗಲಿ
ಬೆಂಗಳೂರು: ಬೆಂಗಳೂರಿನ ಪ್ರತಿಷ್ಠಿತ ಪೋರ್ಟಿಸ್ ಆಸ್ಪತ್ರೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದ ರೋಗಿಗೆ ಆ್ಯಂಬುಲೆನ್ಸ್ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ.ನ.3ರಂದು ಸಂದೀಪ್ ಎಂಬಾತನಿಗೆ ಕಾರ್ಡಿಯಾಕ್ ಅರೆಸ್ಟ್ ಆಗಿತ್ತು. ಆಗ ತಕ್ಷಣ ಸಂದೀಪ್ ಸ್ನೇಹಿತರು ಪೋರ್ಟಿಸ್ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಹೆಚ್ವಿನ ಚಿಕಿತ್ಸೆ ಅಗತ್ಯ ಇರುವ ಹಿನ್ನಲೆಯಲ್ಲಿ ತಮ್ಮದೇ ಕನ್ನಿಂಗ್ ಹ್ಯಾಂ ರಸ್ತೆಯ ಪೋರ್ಟಿಸ್ ಆಸ್ಪತ್ರೆಗೆ ರೆಫರ್ ಮಾಡಿದ್ದರು.
ಈ ವೇಳೆ ಗೋಲ್ಡನ್ ಅವರ್ ವ್ಯರ್ಥವಾಗುತ್ತೆ ಎನ್ನುವ ಕಾರಣಕ್ಕೆ ಸಂದೀಪ್ ಸ್ನೇಹಿತರು ಲಕ್ಷ್ಮಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದರು. ಈ ವೇಳೆ ಆ್ಯಂಬುಲೆನ್ಸ್ ನೀಡಲು ನಾಗರಭಾವಿಯ ಪೋರ್ಟಿಸ್ ಆಸ್ಪತ್ರೆ ಆ್ಯಂಬುಲೆನ್ಸ್ ನೀಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಈ ಕುರಿತು ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು NCR ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ.
Kshetra Samachara
10/11/2021 01:29 pm