ಬೆಂಗಳೂರು: ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿಯಲ್ಲಿ ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ಥೆ ಆರೋಗ್ಯದಲ್ಲಿ ನಿರೀಕ್ಷೆಗೂ ಮೀರಿ ಸುಧಾರಣೆ ಕಾಣಿಸಿದೆ.
72 ದಿನದ ಬಳಿಕ ಐಸಿಯು ವಾರ್ಡ್ ನಿಂದ ಸ್ಪೆಷಲ್ ವಾರ್ಡ್ ಗೆ ಯುವತಿಯನ್ನು ಶಿಫ್ಟ್ ಮಾಡಲಾಗಿದೆ. ದೇಹದ ಮೇಲೆ ಆ್ಯಸಿಡ್ ಬಿದ್ದ ಭಾಗದಲ್ಲಿ ಒಂದು ಹಂತದ ಪ್ಲಾಸ್ಟಿಕ್ ಸರ್ಜರಿ ಮುಗಿದಿದೆ. ಫಿಸಿಯೋಥೆರಪಿಸ್ಟ್ ಸ್ಪೆಷಲಿಸ್ಟ್ ಸಿಬ್ಬಂದಿಯಿಂದ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿದೆ.ಒಂದೇ ಡೈರಕ್ಷನ್ ನಲ್ಲಿ ಮಲಗ್ತಿದ್ದ ಯುವತಿಗೆ ಕೈ ಕಾಲು ಆಡಿಸಲು , ಕುಳಿತುಕೊಳ್ಳಲು ಆಗುತ್ತಿದೆ. ಯುವತಿಗೆ ಪೈಪ್ ಮೂಲಕ ಲಘು ನೀರಿನಾಂಶದ ಆಹಾರ ವೈದ್ಯರು ನೀಡುತ್ತಿದ್ದಾರೆ.
ಯುವತಿ ಆರೋಗ್ಯದಲ್ಲಿ ಸುಧಾರಣೆ ಹಿನ್ನೆಲೆ ತಿಂಡಿ- ಊಟ ಸಹ ನೀಡಲಾಗ್ತಿದೆ. ಸರ್ಜರಿ ಸ್ಥಳದಲ್ಲಿ ಇನ್ಫೆಕ್ಷನ್ ಆಗ್ತಿದ್ದ ಹಿನ್ನೆಲೆ ಚಿಕಿತ್ಸೆ ಮುಂದುವರೆದಿದೆ. ಇನ್ನೆರಡು ತಿಂಗಳು ಚಿಕಿತ್ಸೆ ಮುಂದುವರೆಸಬೇಕೆಂದು ಸೆಂಟ್ ಜಾನ್ಸ್ ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದ್ದಾರೆ. ದಿನದಿಂದ ದಿನಕ್ಕೆ ಮಗಳ ಆರೋಗ್ಯದಲ್ಲಿ ಸುಧಾರಣೆ ಹಿನ್ನೆಲೆ ಪೋಷಕರಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.
ಆರೋಪಿ ನಾಗೇಶ್ ಯುವತಿಗೆ ಆ್ಯಸಿಡ್ ಹಾಕಿ ಪರಾರಿಯಾಗಿದ್ದ. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸ್ರು ಆರೋಪಿ ಬಂಧಿಸಿದ್ರು
PublicNext
09/07/2022 02:10 pm