ಬೆಂಗಳೂರು : ಪಾಗಲ್ ಪ್ರೇಮಿ ಹುಚ್ಚಾಟದಿಂದ ಆ್ಯಸಿಡ್ ದಾಳಿಗೊಳಗಾದ ಯುವತಿಯ ಪರಿಸ್ಥಿತಿ ಈಗ ಹೇಗಿದೆ ಎನ್ನುವ ಬಗ್ಗೆ ಸೇಂಟ್ ಜಾನ್ಸ್ ಹಾಸ್ಪಿಟಲ್ ನ CMO ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಆಸ್ಪತ್ರೆಯ ಬೆಡ್ ನಲ್ಲಿ ಮಲಗಿರುವ ಆ್ಯಸಿಡ್ ದಾಳಿಗೆ ಒಳಗಾಗಿ ಹುಡುಗಿಯ ಸ್ಥಿತಿ ಚಿಂತಾಜನಕವಾಗಿದೆ. ಇನ್ನೂ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯುವತಿ.ಎರಡು ಬಾರಿ ಸ್ಕಿನ್ ಆಪರೇಷನ್ ಮಾಡಿರುವ ವೈದ್ಯರು ಇನ್ನೂ ಕೂಡ ಯುವತಿಯ ಸ್ಥಿತಿ ಗಂಭೀರವಾಗಿದೆ ಈಗಲೇ ಏನನ್ನೂ ಹೇಳಲು ಆಗುವುದಿಲ್ಲ ಎಂದಿದ್ದಾರೆ.
ಯುವತಿಯ ಆರೋಗ್ಯ ಸ್ಥಿತಿಯಲ್ಲಿ ಕೊಂಚ ಚೇತರಿಕೆ ಇದೆ ಆದರೆ ಜ್ವರ ಏನಾದರೂ ಬಂದ್ರೆ ಯುವತಿಯ ಆರೋಗ್ಯದಲ್ಲಿ ಏರುಪೇರು ಆಗಬಹುದು ಎಂದು ವೈದ್ಯರು ಹೇಳಿದ್ದಾರೆ. ಒಂದು ತಿಂಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದರು.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
Kshetra Samachara
09/05/2022 08:42 pm