ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ನಿಧಾನವಾಗಿ ಏರಿಕೆ ಆಗ್ತಿದೆ. ಈ ಮಧ್ಯೆ BA.4 ಹಾಗೂ BA.5 ಎಂಬ ಒಮಿಕ್ರಾನ್ ನ ಎರಡು ಉಪತಳಿಗಳು ಪತ್ತೆಯಾಗಿವೆ. ಈ ಕುರಿತು ಹೆಚ್ಚಿನ ಅಧ್ಯಯನಕ್ಕೆ ವೈರಾಲಜಿಸ್ಟ್ ಮುಂದಾಗಿದ್ದು, ಲಕ್ಷಣಗಳೇನು, ಎಷ್ಟು ಅಪಾಯಕಾರಿ ಎಂಬುದು ತಿಳಿಯಲಿದೆ.
ಒಮಿಕ್ರಾನ್ ನ BA.2 ಮೂರನೇ ಅಲೆಯಲ್ಲಿ ಹೆಚ್ಚು ಸೋಂಕು ಹರಡಲು ಕಾರಣವಾಗಿತ್ತು. ಈಗ ಈಗ ಒಮಿಕ್ರಾನ್ ನ BA.4 ಹಾಗೂ BA.5 ಉಪತಳಿ ಪತ್ತೆಯಾಗಿದೆ. ಈ ಉಪತಳಿ BA.2ನ ಸೀಕ್ವೆನ್ಸ್ ಗಿಂತ ವಿಭಿನ್ನ ಎಂದು ಹೇಳಲಾಗುತ್ತಿದೆ. ಒಮಿಕ್ರಾನ್ ಸೋಂಕಿತರಿಗೂ ಮತ್ತೆ ಸೋಂಕು ತಗುಲುವ ಸಾಧ್ಯತೆ ಇದೆಯಂತೆ. ನಾಲ್ಕನೇ ಅಲೆಯಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗುತ್ತಾ ಹೊಸ ಉಪತಳಿಗಳು? ಎಂಬ ಆತಂಕ ಮೂಡಿದೆ.
Kshetra Samachara
06/05/2022 06:09 pm