ಬೆಂಗಳೂರು: ʼಮಳೆ ನಿಂತರೂ ಹನಿ ಕಾಟ ತಪ್ಪಿಲ್ಲʼ ಎಂಬಂತೆ ಕೊರೊನಾ ಎಫೆಕ್ಟ್ ಕಡಿಮೆ ಆದ್ರೂ 4ನೇ ಅಲೆ ಭೀತಿ ಇದ್ದೇ ಇದೆ. ಆದ್ದರಿಂದ ಬೆಂಗಳೂರಿನ ಎರಡು ಕುಟುಂಬಗಳು ತಮ್ಮ ಮಗ ಹಾಗೂ ಮಗಳ ಮದುವೆಯನ್ನೇ ಕೊರೊನಾ ಜಾಗೃತಿಗಾಗಿ ಮದುವೆ ಮಂಟಪವನ್ನೇ ವೇದಿಕೆ ಮಾಡಿಕೊಂಡಿದ್ದಾರೆ ! ಈ ಬಗ್ಗೆ ವಿಶೇಷ ವರದಿ ನಿಮ್ಮ ಮುಂದೆ...
ಬೆಂಗಳೂರಿನ ವಿ.ವಿ. ಪುರ ವಾಸಿ ಅಶೋಕ್ ಗಜಾನನ ತಮ್ಮ ಪುತ್ರಿ ಯಾಶಿಕಾ ಗಜಾನನರನ್ನು ಬೆಂಗಳೂರಿನ ಜಯನಗರ ವಾಸಿ ರಾಜೇಶ್ ಕುಮಾರ್ ರಾಂಕ ಅವರ ಪುತ್ರ ರೋಹಿತ್ ಕುಮಾರ್ ರಾಂಕಗೆ ಕೊಟ್ಟು ವಿವಾಹ ಮಾಡಿದ್ದಾರೆ. ಎರಡೂ ಕುಟುಂಬಗಳು ಮೊದಲೇ ನಿರ್ಧರಿಸಿದಂತೆ ಮದುವೆ ತಾಣವನ್ನೇ ಕೊರೊನಾ ನಿಯಂತ್ರಣದ ಜಾಗೃತಿ ಸ್ಥಳವನ್ನಾಗಿ ಪರಿವರ್ತಿಸಿದ್ದಾರೆ.
ಮದುವೆಯಲ್ಲಿ ಕುಟುಂಬ ಮಂದಿ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸೋಂಕು ಹರಡುವುದನ್ನು ತಡೆಯುವ ಬಗ್ಗೆ ಭಿತ್ತಿಪತ್ರ ಹಿಡಿದು, ಒಡ್ಡೋಲಗದ ಮೂಲಕ ಜಾಗೃತಿ ಮೂಡಿಸಿದರು. ವಧು-ವರರೇ ಭಿತ್ತಿಪತ್ರ ಹಿಡಿದು ದಿಬ್ಬಣ ಹೊರಟಿದ್ದು ಎರಡೂ ಕುಟುಂಬಗಳ ಹೆಗ್ಗಳಿಕೆಯೇ ಸರಿ.
ಮದುವೆ ಆಮಂತ್ರಣವೇ ವಿಶೇಷ, ವಿಭಿನ್ನವಾಗಿದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಇರಲಿ. ಸ್ಯಾನಿಟೈಸ್ ಬಳಸಿ, ಕೊರೊನಾ ಬಗ್ಗೆ ಇರಲಿ ಎಚ್ಚರ! ಎಂಬ ವಾಕ್ಯ ಸಾಮಾಜಿಕ ಕಳಕಳಿ ಸೂಚಿಸುತ್ತದೆ. ವರ- ವಧುವಿನ ಪಾಲಕರ ನಿರ್ಧಾರ ಶ್ಲಾಘನೀಯ.
3ನೇ ಅಲೆ ಹೋಗಿ, ಮತ್ತೆ 4ನೇ ಅಲೆ ಆರಂಭವಾಗುತ್ತಿದೆ. ಚೀನಾದಲ್ಲಿ ಮತ್ತೆ ಭಯ ಹುಟ್ಟಿಸುತ್ತಿರುವ ಕೊರೊನಾ ಹಾವಳಿ ಭಾರತ ತಲುಪದಿರಲಿ. ಆದ್ದರಿಂದ ಜನರೆಲ್ಲ ಜಾಗೃತರಾಗಿರೋಣ ಅಂತಾರೆ ವರ.
-SureshBabu Public Next ಬೆಂಗಳೂರು
PublicNext
20/04/2022 05:43 pm