ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಬಿಎಂಪಿ ಯಡವಟ್ಟು ಸತ್ತವರಿಗೆ ವ್ಯಾಕ್ಸಿನ್ : 8 ತಿಂಗಳ ಹಿಂದೆ ಕೋವಿಡ್ ನಿಂದ ಸತ್ತವನಿಗೆ ಸರ್ಟಿಫಿಕೇಟ್

ವರದಿ - ಗಣೇಶ್ ಹೆಗಡೆ

ಬೆಂಗಳೂರು : ಡೆಡ್ಲಿ ಸೋಂಕು ಕೊರೊನಾದಿಂದಲೇ 8 ತಿಂಗಳ ಹಿಂದೆ ಮೃತಪಟ್ಟ ವ್ಯಕ್ತಿಯೊಬ್ಬರ ಮೊಬೈಲ್ ಗೆ ಕೊರೊನಾ ಎರಡನೇ ಲಸಿಕೆ ಪಡೆದ ಮೆಸೇಜ್ ಬಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಹೌದು 8 ತಿಂಗಳ ಹಿಂದೆ ನಿಧನರಾದ ಉತ್ತರಹಳ್ಳಿಯ ನಿವಾಸಿ ರಾಘ ವೆಂದ್ರ ರಾವ್ ವಿ.ಎಸ್ ಅವರ ಮೊಬೈಲ್ ಸಂಖ್ಯೆಗೆ ಈ ರೀತಿ ಮೆಸೇಜ್ ಬಂದಿರುವುದನ್ನು ಕಂಡ ಕುಟುಂಬಸ್ಥರು ಅಚ್ಚರಿಗೊಂಡಿದ್ದಾರೆ.

ಪಾಲಿಕೆ ಹಾಗೂ ರಾಜ್ಯ ಸರ್ಕಾರ ಆರೋಗ್ಯ ಇಲಾಖೆಯ ಯಡವಟ್ಟನಿಂದ ಈ ಘಟನೆ ನಡೆದಿದ್ದು ಲಸಿಕೆ ಟಾರ್ಗೆಟ್ ರೀಚ್ ಆಗಲು ಮೃತಪಟ್ಟವರಿಗೂ ಲಸಿಕೆ ನೀಡಿ ಸರ್ಟಿಫಿಕೇಟ್ ಕಳುಹಿಸಿರುವುದು ಮಾತ್ರ ವಿಪರ್ಯಾಸವೇ ಸರಿ.

Edited By : Nagesh Gaonkar
PublicNext

PublicNext

25/01/2022 07:39 pm

Cinque Terre

33.35 K

Cinque Terre

3

ಸಂಬಂಧಿತ ಸುದ್ದಿ