ಯಲಹಂಕ: ಬೆಂಗಳೂರು ಉತ್ತರದ ಯಲಹಂಕ ವಲಯದ 11 ವಾರ್ಡ್ ಗಳಲ್ಲಿ ಕಳೆದ ಒಂದು ವಾರದಲ್ಲಿ 9784 ಕೇಸ್ ಗಳು ದಾಖಲಾಗಿವೆ. ಇನ್ನು ಆತಂಕದ ವಿಷಯವೆಂದರೆ 1ರಿಂದ 18 ವರ್ಷ ವಯಸ್ಸಿನ 189 ಮಕ್ಕಳಿಗೆ ಕೊರೊನಾ ಸೋಂಕು ವಕ್ಕರಿಸಿದೆ!
ಯಲಹಂಕ ಬಿಬಿಎಂಪಿ ವಲಯದ ಅಟ್ಟೂರು ಮೂರನೇ ವಾರ್ಡ್ ಮತ್ತು ಬ್ಯಾಟರಾಯನಪುರದ ಏಳನೇ ವಾರ್ಡ್ ನಲ್ಲಿ 76 ಕೇಸ್ ಗಳು ಕೋವಿಡ್ ಕಂಟ್ರೋಲ್ ರೂಮ್ ಗೆ ದಾಖಲಾಗಿವೆ.
ಯಲಹಂಕದ ಅಟ್ಟೂರು ವಾರ್ಡ್ ನ ನರ್ಸಿಂಗ್ ಕಾಲೇಜುಗಳ ಹಾಸ್ಟೆಲ್ ಗಳಲ್ಲಿ ಕೊರೊನಾ ಅಬ್ಬರಿಸುತ್ತಿದೆ. ಅಟ್ಟೂರಿನ S.B.ನರ್ಸಿಂಗ್ ಕಾಲೇಜಿನ ಹಾಸ್ಟೆಲ್ ನಲ್ಲಿ 50 ಕೇಸ್ ಗಳು ಕನ್ಫರ್ಮ್ ಆಗಿವೆ. ಹಾಗೆಯೇ ವಾರ್ಡ್ ನಂಬರ್ 6 ಥಣಿಸಂದ್ರದ ಸೈಂಟ್ ಥೆರೇಸಾ ಕಾಲೇಜಿನ ಹಾಸ್ಟೆಲ್ ನಲ್ಲಿ 40 ಕೇಸ್ ಗಳು, ವಾರ್ಡ್ ನಂಬರ್ 4 ಯಲಹಂಕ ಉಪನಗರದ ಈಸ್ಟ್ ವೆಸ್ಟ್ ನರ್ಸಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ 20 ಕೇಸ್ ಗಳು, KNN ನರ್ಸಿಂಗ್ ಕಾಲೇಜ್ ಹಾಸ್ಟೆಲ್ ನಲ್ಲಿ 14 ಕೇಸ್ ಗಳು ದಾಖಲಾಗಿದೆ.
ಕಳೆದ 14 ದಿನಗಳಲ್ಲಿ 7 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಜನವರಿ ತಿಂಗಳಲ್ಲಿ ಇದುವರೆಗೂ 13340 ಕೇಸ್ ಗಳು ದಾಖಲಾಗಿದ್ದರೆ, 1164 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಯಲಹಂಕ ವಲಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ. 18ರಷ್ಟಿದೆ. ಎಷ್ಟೇ ರೂಲ್ಸ್ & ರೆಗ್ಯೂಲೇಶನ್ಸ್ ಜಾರಿಯಿದ್ದರೂ ಯಲಹಂಕದ 11 ವಾರ್ಡ್ ಗಳಲ್ಲಿ ಸೋಂಕಿತರ ಸಂಖ್ಯೆ
ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ!
Kshetra Samachara
19/01/2022 09:12 pm