ಬೆಂಗಳೂರು: ಇಂದು ಬುಧವಾರ ವಿವಿಧ ದೇಶಗಳಿಂದ ದೇವನಹಳ್ಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನಗಳ ಮೂಲಕ ಆಗಮಿಸಿದ 13 ಪ್ರಯಾಣಿಕರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಲಂಡನ್‌ನ 7 ಜನರಿಗೆ, ಯುಎಸ್‌ನ ಮೂವರಿಗೆ, ಜರ್ಮನಿ ಒಬ್ಬನಿಗೆ, ಸ್ಪೇನ್ ನ ಓರ್ವನಿಗೆ ಮತ್ತು ಫ್ರಾನ್ಸ್ ದೇಶದ ಒಬ್ಬನಿಗೆ ಇಂದು ಕರೋನಾ ಸೋಂಕು ತಗುಲಿದೆ.
ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರನ್ನು RTPCR ತಪಾಸಣೆಗೆ ಒಳಪಡಿಸಿದಾಗ ಕರೋನಾ ಕನ್ಫರ್ಮ್ ಆಗಿದೆ. ಎಲ್ಲಾ 13ಜನ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೌರಿಂಗ್ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಆರೋಗ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
Kshetra Samachara
19/01/2022 10:31 am