ಬೆಂಗಳೂರು: ಕೊರೊನಾ ಮೂರನೆ ಅಲೆಯಲ್ಲಿ ಪೊಲೀಸ್ ಇಲಾಖೆಯಲ್ಲಿ ಕೋವಿಡ್ ಆತಂಕ ಹೆಚ್ಚಾಗುತ್ತಿದೆ. ಮಾಸ್ಕ್ ಚೆಕ್ಕಿಂಗ್ ವೀಕೆಂಡ್ ಕರ್ಫ್ಯೂ ವೇಳೆಯಲ್ಲಿಯೇ ಸಿಬ್ಬಂದಿಗೆ ಕೋವಿಡ್ ಪಾಸಿಟೀವ್ ರೇಟ್ ಹೆಚ್ಚಾಗ್ತಿದೆ.
ನಿನ್ನೆ ಒಂದೇ ನಗರದಲ್ಲಿ 42 ಜನ ಪೊಲೀಸರಿಗೆ ಕೊರೊನಾ ಪಾಸಿಟಿವ್ ಕಂಡುಬಂದಿತ್ತು.ಇಂದು ಕೂಡ ಸಿಸಿಬಿಯಲ್ಲಿ 15 ಸಿಬ್ಬಂದಿ ಹಾಗೂ ಪಶ್ಚಿಮ ವಿಭಾಗದಲ್ಲಿ 12 ಸಿಬ್ಬಂದಿಗೆ ಪಾಸಿಟೀವ್ ಬಂದಿದೆ. ನೈಟ್ ಕರ್ಫ್ಯೂ ಜಾರಿಯಾದಾಗಿನಿಂದ ಈವರೆಗೆ ನಗರದಲ್ಲಿ 135ಕ್ಕೂ ಹೆಚ್ಚು ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಕೊರೊನಾದಿಂದ 6 ಸಿಬ್ಬಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕ್ ಹಾಕದಿರುವವರಿಗೆ ಫೈನ್ ಹಾಕಲು ನಿಯೋಜಿಸಿದ್ದ ಸಿಬ್ಬಂದಿಗೆ ಹೆಚ್ಚಾಗಿ ಪಾಸಿಟಿವ್ ಬಂದಿದೆ ಎಂದಿದ್ದಾರೆ.
ಪೂರ್ವ ವಿಭಾಗದ ಪೊಲೀಸರಲ್ಲಿ ಒಟ್ಟು 72 ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಇದ್ರಲ್ಲಿ ಓರ್ವ ಇನ್ಸ್ಪೆಕ್ಟರ್ ಇಬ್ಬರು ಪಿಎಸ್ ಐ ಮಟ್ಟದ ಅಧಿಕಾರಿಗಳು ಕೂಡ ಕ್ವಾರಂಟೈನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Kshetra Samachara
10/01/2022 03:42 pm