ಬೆಂಗಳೂರು:ರಾಜಧಾನಿ ಬೆಂಗಳೂರು ಕೋವಿಡ್ ಹಾಟ್ ಸ್ಪಾಟ್ ಆಗುವ ಲಕ್ಷಣಗಳು ಗೋಚರಿಸುತ್ತಿದೆ.
ಹೌದು. ಸಿಲಿಕಾನ್ ಸಿಟಿಯ ಚಿಣ್ಣರ ಮೇಲೆ ಕೋವಿಡ್ ಕರಿ ನೆರಳು ಬಿದ್ದಿದೆ. ಕಳೆದ ಒಂದು ವಾರದಲ್ಲಿ 2,628 ಕೇಸ್ ಗಳು ಬೆಳಕಿಗೆ ಬಂದಿದೆ.
19 ವರ್ಷದೊಳಗಿನ ಮಕ್ಕಳಲ್ಲಿ ಸೋಂಕು ಸಾಕಷ್ಟು ಕಾಣಿಸಿ ಕೊಂಡಿದೆ. ಸರಾಸರಿ ನಿತ್ಯ 375 ಮಕ್ಕಳಲ್ಲಿ ಕೊರೊನಾ ಸೋಂಕು ಪತ್ತೆಯಾಗುತ್ತಿದೆ.
ಈ ಪೈಕಿ 571 ಮಕ್ಕಳು 9 ವರ್ಷದ ಒಳಗಿನವರಾಗಿದ್ದರೇ, 2059 ಮಕ್ಕಳು 19 ವರ್ಷದ ಒಳಗಿನವರು ಆಗಿದ್ದಾರೆ. ಇದರಲ್ಲಿ 1,311 ಹೆಣ್ಣು ಹಾಗೂ 1,317 ಗಂಡು ಮಕ್ಕಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.
PublicNext
08/01/2022 12:14 pm