ವರದಿ - ಗಣೇಶ್ ಹೆಗಡೆ
ಬೆಂಗಳೂರು - ಸಿಲಿಕಾನ್ ಸಿಟಿ ಯಲ್ಲಿ ಒಮಿಕ್ರಾನ್ ಉಲ್ಬಣಿ ಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ ದಂಡದ ಮೊತ್ತವನ್ನು ಸಾವಿರ ರೂ ಏರಿಕೆ ಮಾಡಲು ಪಾಲಿಕೆ ಚಿಂತನೆ ನಡೆಸಿದೆ.
ಹೌದು..ಸದ್ಯ 250 ರೂ.ದಂಡ ವನ್ನು ಸಾರ್ವಜನಿಕರಿಗೆ ಹಾಕ ಲಾಗುತ್ತದೆ. ಆದರೆ ಜನರಲ್ಲಿ ಮತ್ತಷ್ಟು ಜಾಗೃತಿ ಅನಿವಾರ್ಯ ವಾಗಿದೆ. ಈ ಹಿನ್ನೆಲೆ ದಂಡ ಮೊತ್ತ ಸಾವಿರ ರೂ. ಏರಿಕೆ ಬಗ್ಗೆ ಚರ್ಚೆ ನಡೆಸುತ್ತಿದೆ.
ಜನರಲ್ಲಿ ಕೊವೀಡ್ ಬಗೆಗಿನ ಭೀತಿ ಇಲ್ಲದಾಗಿದೆ. ಮಾಸ್ಕ್ ಹಾಗದೇ, ಸಾಮಾಜಿಕ ಅಂತರ ಇಲ್ಲದೆ ಬೇಕಾ ಬಿಟ್ಟಿ ಓಡಾಡುತ್ತಿದ್ದಾರೆ. ಹೀಗಾಗಿ ದಂಡದ ಮೊತ್ತ ಜಾಸ್ತಿ ಮಾಡಿದ್ರೆ ಜನರಲ್ಲಿ ಭಯ ಸೃಷ್ಟಿಯಾಗುತ್ತೆ ಅನ್ನೋ ಲೆಕ್ಕಚಾರ ಬಿಬಿಎಂಪಿ ಯದ್ದು.
ಆ ಹಿನ್ನೆಲೆಯಲ್ಲಿ ದಂಡ ಮೊತ್ತ ಸಾವಿರ ರೂ ಏರಿಕೆ ಬಗ್ಗೆ ಪ್ರಸ್ತಾವನೆ ಮುಂದಿಟ್ಟುಕೊಂಡಿದ್ದು, ಸರ್ಕಾರದ ಮುಂದಿಡಲು ಚಿಂತನೆ ನಡೆದಿದೆ.
PublicNext
05/01/2022 03:09 pm