ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕದಲ್ಲಿ ಲಸಿಕಾರಣ ಅಭಿಯಾನಕ್ಕೆ ಚಾಲನೆ

ಯಲಹಂಕ: ಒಮಿಕ್ರಾನ್ ಆತಂಕ ಹೆಚ್ಚುತ್ತಿರುವ ಬೆನ್ನಲ್ಲೆ ಸರ್ಕಾರ 15ವರ್ಷ ಮೇಲ್ಪಟ್ಟ 18ವರ್ಷದೊಳಗಿನ ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನವನ್ನು ರಾಜ್ಯ ಸರ್ಕಾರ ಆರಂಭಿಸಿದೆ.. ಯಲಹಂಕ ಬಿಬಿಎಂಪಿ ವ್ಯಾಪ್ತಿಯಲ್ಲಿ ಸ್ಥಳೀಯ ಶಾಸಕ S.R.ವಿಶ್ವನಾಥ್ ಹಾಗೂ ಯಲಹಂಕ ವಲಯ ಬಿಬಿಎಂಪಿ ಜಂಟಿ ಆಯುಕ್ತೆ ಪೂರ್ಣಿಮ ರವರು ಇಂದು ಚಾಲನೆ ನೀಡಿದರು..

ಬಿಬಿಎಂಪಿ ಯಲಹಂಕವಲಯ ವ್ಯಾಪ್ತಿಯ ಯಲಹಂಕ ಉಪನಗರದ ಸರ್ಕಾರಿ ಪ್ರಾಥಮಿಕ & ಪ್ರೌಢಶಾಲೆಯಲ್ಲಿ ಬಿಬಿಎಂಪಿವತಿಯಿಂದ 15ರಿಂದ 18ವರ್ಷ ಮಕ್ಕಳಿಗೆ ಲಸಿಕೆ ಹಾಕಲಾಯ್ತು.. ಸರ್ಕಾರ ಆಯೋಜಿಸಿದ್ದ ಲಸಿಕಾಕರಣ ಕಾರ್ಯಕ್ರಮದಲ್ಲಿ 

9ನೇ ತರಗತಿಯ 120 ಮಕ್ಕಳಿಗೆ ಇಂದು ಸರ್ಕಾರಿ ಶಾಲೆಯಲ್ಲಿ ಲಸಿಕೆ ನೀಡಲಾಯಿತು.

ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಶಾಸಕ ಎಸ್.ಆರ್.ವಿಶ್ವನಾಥ್, ನರೇಂದ್ರ ಮೋದಿ ನಾಯಕತ್ವ ಹಾಗು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಲಸಿಕಾಕರಣ ಅಭಿಯಾನ ಆರಂಭಿಸಲಾಗಿದೆ.  ತಂದೆ, ತಾಯಿಗಳ ಒಪ್ಪಿಗೆ ಮೇರೆಗೆ ಶಾಲೆಯಲ್ಲೆ ಲಸಿಕೆಗಳನ್ನು ನೀಡಲಾಗುತ್ತಿದೆ.. ಯಾರೊಬ್ಬರು ಆತಂಕ ಪಡುವ ಅಗತ್ಯವಿಲ್ಲ. ಡಾಕ್ಟರ್, ಆಶಾ ಕಾರ್ಯಕರ್ತರು, ಸ್ವಯಂಸೇವಕರ ತಂಡ ಲಸಿಕೆ ಪಡೆದ ಮಕ್ಕಳ ಆರೋಗ್ಯದಲ್ಲಿ ಏರುಪೇರಾದರೆ ಚಿಕಿತ್ಸೆ ನೀಡಲು ಸಿದ್ದವಿರುತ್ತದೆ ಎಂದರು..

ಯಲಹಂಕ ಬಿಬಿಎಂಪಿ ವಲಯದ ಜಂಟಿ ಆಯುಕ್ತೆ ಪೂರ್ಣಿಮ ಮಾತನಾಡಿ, ನಮ್ಮ ವಲಯ ವ್ಯಾಪ್ತಿಯಲ್ಲಿ ಎಸ್ಸೆಸೆಲ್ಸಿಯಿಂದ ಪದವಿವರೆಗಿನ ವಿದ್ಯಾರ್ಥಿಗಳಿಗೆ 30,658 ಮಕ್ಕಳಿಗೆ ಲಸಿಕೆ ನೀಡಲು ಗುರುತಿಸಲಾಗಿದೆ.. ಇಂದು ಯಲಹಂಕ ಉಪನಗರ ಸರ್ಕಾರಿ ಶಾಲೆಯಲ್ಲಿ 9ನೇ ತರಗತಿಯ 120 ಮಕ್ಕಳಿದ್ದು, ಇದರಲ್ಲಿ 60ಮಕ್ಕಳಿಗೆ ಲಸಿಕೆ ನೀಡಲು ಚಾಲನೆ ನೀಡಲಾಗಿದೆ.. ಇನ್ನುಳಿದಂತೆ ಎನ್ಇಎಸ್ ವೃತ್ತದಲ್ಲೂ ಲಸಿಕೆ ಅಭಿಯಾನ ನಡೆಸಲಾಗುತ್ತಿದೆ.. ಮುಂದಿನ ದಿನಗಳಲ್ಲಿ ಪ್ರತಿ ಶಾಲೆಗೂ ಮಾಹಿತಿ ನೀಡಿ ಹಂತಹಂತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದರು.

Edited By : Manjunath H D
Kshetra Samachara

Kshetra Samachara

03/01/2022 12:46 pm

Cinque Terre

996

Cinque Terre

0

ಸಂಬಂಧಿತ ಸುದ್ದಿ