ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳ ವ್ಯಾಕ್ಸಿನ್ ಅಭಿಯಾನ ಚುರುಕು, ಇಂದು 700ಮಕ್ಕಳಿಗೆ ವ್ಯಾಕ್ಸಿನ್ ಟಾರ್ಗೆಟ್‌

ಬೆಂಗಳೂರು: 15 ರಿಂದ 18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್‌ ಅಭಿಯಾನಕ್ಕೆ ಸಿಎಂ ಚಾಲನೆ ನೀಡುತ್ತಿದ್ದಂತೆ ವ್ಯಾಕ್ಸಿನೇಷನ್‌ ಪ್ರಕ್ರಿಯೆ ಚುರುಕುಗೊಂಡಿದೆ. ನಗರದ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕಲು ಬಿಬಿಎಂಪಿ ಮುಂದಾಗಿದೆ.ಸುಬ್ರಹ್ಮಣ್ಯನಗರದ ವಿವೇಕಾನಂದ ಕಾಲೇಜಿನಲ್ಲಿ ಲಸಿಕೆ ಹಾಕುವ ಪ್ರಕ್ರಿಯೆ ಆರಂಭಗೊಂಡಿದೆ.

ಮಕ್ಕಳ ಆಧಾರ್ ಕಾರ್ಡ್ ಮತ್ತು ಕಾಲೇಜು ಐಡಿ ಪರಿಶೀಲಿಸಿ ವ್ಯಾಕ್ಸಿನೇಷನ್‌ ಹಾಕಲು ಪೋಷಕರಿಂದ ಕಾಲೇಜು ಆಡಳಿತ ಮಂಡಳಿ ಅನುಮತಿ ಪಡೆದುಕೊಂಡಿದೆ ಹಾಗೂ ಪ್ರತಿ ತರಗತಿಯ ಮಕ್ಕಳನ್ನ ಬ್ಯಾಚ್ ವೈಸ್ ಕರೆದು ಉಪನ್ಯಾಸಕರು ಲಸಿಕೆ ಹಾಕಿಸುತ್ತಿದ್ದಾರೆ ಒಟ್ಟು 700 ಕ್ಕೂ ಹೆಚ್ಚಿನ ಮಕ್ಕಳಿಗೆ ಬಿಬಿಎಂಪಿ ವೈದ್ಯರು ಕೊವ್ಯಾಕ್ಸಿನ್ ಲಸಿಕೆ ನೀಡುತ್ತಿದ್ದಾರೆ.

Edited By : Manjunath H D
Kshetra Samachara

Kshetra Samachara

03/01/2022 12:06 pm

Cinque Terre

450

Cinque Terre

0

ಸಂಬಂಧಿತ ಸುದ್ದಿ