ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ʼಒಮಿಕ್ರಾನ್ʼ ಸದ್ಯಕ್ಕೆ ಭಯ ಬೇಡ; ಐಸಿಯು ಕೇಸ್ ಶೂನ್ಯ

ಬೆಂಗಳೂರು: ಕೋವಿಡ್ ರೂಪಾಂತರಿ ವೈರಾಣು ಮಾನವ ಜೀವಕ್ಕೆ ಅಷ್ಟೊಂದು ಮಾರಕವಲ್ಲ.‌ ಕಾರಣ‌, ರಾಜಧಾನಿ ಬೆಂಗಳೂರಿನಲ್ಲಿ ಇಲ್ಲಿಯವರೆಗೂ ಒಮಿಕ್ರಾನ್ ಬಾಧಿಸಿ, ಐಸಿಯುಗೆ ಅಡ್ಮಿಟ್ ಆದ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.

ಇವತ್ತಿಗೆ 24 ಒಮಿಕ್ರಾನ್ ಕೇಸ್ ಗಳು ಬೆಂಗಳೂರಿನಲ್ಲಿ ಪತ್ತೆ ಆಗಿವೆ. ಅದರೆ, ಜೀವ ಕಳೆದುಕೊಳ್ಳುವ ಸ್ಥಿತಿಗೆ ತಲುಪಿರುವ ಪ್ರಕರಣ ಬೆಳಕಿಗೆ ಬಂದಿಲ್ಲ. ಇದಕ್ಕೆ ಇಲ್ಲಿವರೆಗೂ ಒಮಿಕ್ರಾನ್ ಬಂದು ಗುಣಮುಖರಾದ ರೋಗಿಗಳೇ ನಿದರ್ಶನ. ಇನ್ನೊಂದು ವಿಚಾರ ಎಂದರೆ ಕೋವಿಡ್ ಲಸಿಕೆ ಪಡೆದು ಐಸಿಯುನಲ್ಲಿ ಇರುವವರ ಸಂಖ್ಯೆ ಕೂಡ ವಿರಳ. ರಾಜಧಾನಿಯಲ್ಲಿ ಕೇವಲ 2 ಕೇಸ್ ಗಳು ಮಾತ್ರ ಪತ್ತೆಯಾಗಿದೆ.

ಒಟ್ಟಾರೆ ಒಮಿಕ್ರಾನ್ ಒಂದೆಡೆ ಹೆಚ್ಚಳವಾದ್ರೂ ಮಾರಣಾಂತಿಕವಲ್ಲ ಎಂಬುದು ಬಿಬಿಎಂಪಿ ಮುಖ್ಯ ಆರೋಗ್ಯ ಅಧಿಕಾರಿ ಡಾ‌.ಬಾಲಸುಂದರ್‌ ಅವರ ಅಭಿಪ್ರಾಯವಾಗಿದೆ.

ವಿಶೇಷ ವರದಿ: ಗಣೇಶ್ ಹೆಗಡೆ

Edited By : Nagaraj Tulugeri
Kshetra Samachara

Kshetra Samachara

31/12/2021 06:00 pm

Cinque Terre

412

Cinque Terre

0

ಸಂಬಂಧಿತ ಸುದ್ದಿ