ಬೆಂಗಳೂರು: ಕೊರೊನಾ ಲಸಿಕೆ ಹಾಕಿಸೋದನ್ನ ಹೆಚ್ಚಿಸಲು ಬೆಂಗಳೂರು ಬಿಬಿಎಂಪಿ ಈಗ ಹೊಸ ಪ್ಲಾನ್ ಮಾಡಿದೆ.ಈ ಒಂದು ಪ್ಲಾನ್ ಇರೋ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಸಲ್ಲಿಸಲು ಎಲ್ಲ ಸಿದ್ಧತೆಯನ್ನೂ ಮಾಡಿಕೊಂಡಿದೆ. ಬನ್ನಿ,ಹೇಳ್ತೀವಿ.
ಹೌದು ಇನ್ಮುಮದೆ ಆಟೋ, ಕ್ಯಾಬ್, ಬಸ್, ಮೆಟ್ರೋ ಇಲ್ಲಿ ಸಂಚರಿಸೋ ಪ್ರಯಾಣಿಕರು ಎರಡು ಡೋಸ್ ಲಸಿಕೆ ಹಾಕಿಸಿಕೊಳ್ಳಲೇಬೇಕು.ಹಾಕಿಸೊರೋದಕ್ಕೆ ಕಡ್ಡಾಯವಾಗಿ ಲಸಿಕಾ ಪ್ರಮಾಣ ಪತ್ರವನ್ನ ತೋರಿಸಲೇಬೇಕು. ಇದೇ ನೋಡಿ ಬಿಬಿಎಂಪಿ ಸದ್ಯ ಸಿದ್ದ ಪಡಿಸಿರೋ ಹೊಸ ಪ್ರಸ್ತಾವನೆ. ಇನ್ನೇನೂ ಸರ್ಕಾರಕ್ಕೂ ಇದನ್ನ ಮಂಡಿಸಲಿದೆ.
ಇನ್ನುಳಿದಂತೆ ಚಿತ್ರ ಮಂದಿರ ಮತ್ತು ಮಾಲ್ ಗಳಲ್ಲಿ ಪ್ರವೇಶ ಮಾಡುವವರಿಗೆ ಎರಡು ಡೋಸ್ ಲಸಿಕೆ ಕಡ್ಡಾಯವೇ ಆಗಿದೆ. ಅದಕ್ಕೆ ಸಂಬಂಧಿಸಿದಂತೆ ಆಯಾ ವ್ಯಕ್ತಿಗಳು ಲಸಿಕೆ ಪಡೆದ ಪ್ರಮಾಣ ಪತ್ರವನ್ನ ತೋರಿಸಲೇಬೇಕು.ಇದು ಈಗಾಗಲೇ ಚಾಲ್ತಿಯಲ್ಲಿಯೇ ಇದೆ.
Kshetra Samachara
31/12/2021 11:35 am