ಬೆಂಗಳೂರು : ಕೊವೀಡ್ ವೈರಾಣು ವಿನ ರೂಪಾಂತರಿ ಒಮಿಕ್ರಾನ್ ಸೋಂಕಿತ ವೈದ್ಯನೊಂದಿಗೆ ಸಂಪರ್ಕದಲ್ಲಿದ್ದ ಐದು ಮಂದಿ ಕೊವೀಡ ಸೋಂಕಿತರ ಜಿನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಯ ಫಲಿತಾಂಶದ ವರದಿ ನೆಗೆಟಿವ್ ಬಂದಿದೆ. ಒಮಿಕ್ರಾನ್ ಸೋಂಕಿತ ವೈದ್ಯ ನೊಂದಿಗೆ ನೇರ ಸಂಪರ್ಕದಲ್ಲಿ ಇದ್ದ ಅವರ ಪತ್ನಿ, ಇಬ್ಬರು ಮಕ್ಕಳು, ಹಾಗೂ ಇಬ್ಬರು ಸಹೋದ್ಯೋಗಿ ವೈದ್ಯರಿಗೆ ಕೊವೀಡ್ ತಗಲಿರೋದು ಧೃಡಪಟ್ಟಿತ್ತು.
ಅವರ ಮಾದರಿಗಳನ್ನು ಜಿನೋಮ್ ಸಿಕ್ವೆನ್ಸಿಂಗ್ ಕಳುಹಿಸಲಾಗಿತ್ತು. ಐದು ಮಂದಿ ಒರ್ವ ವೈದ್ಯರಲ್ಲಿ ಡೆಲ್ಟಾ ಸೋಂಕು ಪತ್ತೆಯಾಗಿದೆ. ಉಳಿದವರ ದೇಹದಲ್ಲಿ ಸೋಂಕು ಯಾವುದು ಎಂದು ಪತ್ತೆಯಾಗಿಲ್ಲ. ಹಾಗಾಗಿ ಮತ್ತೊಮ್ಮೆ ಧೃಡೀಕರಣಕ್ಕಾಗಿ ಪರಿಕ್ಷೆಗೆ ಕಳುಹಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
10/12/2021 12:43 pm