ಬೆಂಗಳೂರು: ʼಒಮಿಕ್ರಾನ್ʼ ಭಾರತೀಯರನ್ನು ಕಾಡೋದು ಕಷ್ಟ ಎಂದು ತಜ್ಞ ವೈದ್ಯರು ಅಭಿಪ್ರಾಯ ಪಟ್ಟಿದ್ದಾರೆ.
ಡೆಲ್ಟಾ+ ನಿಂದ ಒಮಿಕ್ರಾನ್ ಅಬ್ಬರ ಭಾರತದಲ್ಲಿ ಕಡಿಮೆ ಆಗಲಿದೆ. ಕಾರಣ ಶೇ. 67 ಮಂದಿಯಲ್ಲಿ ಕೋವಿಡ್ ಪ್ರತಿಕಾಯ ಪತ್ತೆಯಾಗಿದ್ದು, ಈ ವಿಚಾರ ಸೆರೋ ನಡೆಸಿರುವ ಅಧ್ಯ ಯನದಿಂದ ಬಯಲಾಗಿದೆ ಎಂದು ತಜ್ಞ ವೈದ್ಯರು ತಿಳಿಸಿದ್ದಾರೆ.
ಡೆಲ್ಟಾ ವೈರಸ್ ನಿಂದ ಊಹೆಗೂ ಮೀರಿ ಸಾವು-ನೋವು ಸಂಭವಿಸಿತ್ತು. ಭಾರತೀಯರಲ್ಲಿ ಪ್ರತಿಕಾಯಗಳ ಸೃಷ್ಟಿಯಾಗಿದೆ. ಬೆಂಗಳೂರಿನಲ್ಲಿ ಶೇ.75ಕ್ಕೂ ಅಧಿಕ ಜನರಲ್ಲಿ
ಪ್ರತಿರೋಧ ಶಕ್ತಿ ರೂಪುಗೊಂಡಿದೆ.ದಿಲ್ಲಿಯಲ್ಲಿ ಶೇ.97 ಹಾಗೂ ಮುಂಬೈನಲ್ಲಿಶೇ.85 ರಷ್ಟು ಹೆಚ್ಚಳವಾಗಿದೆ ಎಂದು ತಜ್ಞ ವೈದ್ಯರು ಹೇಳಿದ್ದಾರೆ.
Kshetra Samachara
08/12/2021 07:04 pm