ಬೆಂಗಳೂರು : ಸೌತ್ ಆಫ್ರಿಕಾದಿಂದ ಬಂದಂತಹ ವ್ಯಕ್ತಿಯಿಂದ ಖಾಸಗಿ ಕಂಪನಿಯ ಕಾರ್ಮಿಕರಿಗೆ ಕೊರೊನಾ ಹಬ್ಬಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಅಡಾಕಾಕ್ ಇಂನ್ಗ್ರಾಮ್ ಲಿಮಿಟೆಡ್ ಕಂಪನಿ ಯಲ್ಲಿ ನಡೆದಿದೆ.
ನ.20 ರಂದು ಬೆಂಗಳೂರು ಏರ್ ಪೋರ್ಟ್ ಗೆ ಬಂದಿದ್ದ ವ್ಯಕ್ತಿ ಟೆಸ್ಟ್ ನಲ್ಲಿ ಪಾಸಿಟಿವ್ ಬಂದಿತ್ತು ಇದಾದ ಬಳಿಕ ಕ್ವಾರೆಂಟೈನ್ ಮಾಡಿದ್ದ ಆರೋಗ್ಯ ಸಿಬ್ಬಂದಿ ಕೇವಲ ಮೂರೆ ದಿನಕ್ಕೆ ಆತನನ್ನು ಬಿಟ್ಟು ಕಳಿಸಿದ್ದಾರೆ.
ಮೂರು ದಿನಕ್ಕೆ ನೆಗೆಟಿವ್ ರಿಪೋರ್ಟ್ ಬಂದ ಹಿನ್ನಲೆಯಲ್ಲಿ ಆತನನ್ನು ಬಿಟ್ಟು ಕಳಿಸಿದ್ದಾರೆಂದು ತಿಳಿದುಬಂದಿದೆ. ನಂತರ ಆ ವ್ಯಕ್ತಿ ಬೊಮ್ಮಸಂದ್ರದ ಖಾಸಗಿ ಕಂಪನಿಯಾದ ಅಡಾಕಾಕ್ ಕಂಪನಿಯ ಮೀಟಿಂಗ್ ಗೆ ಬಂದು ಹೋಗಿದ್ದಾನೆ ಆದರೆ ಇದೀಗ ಕಂಪನಿಯಲ್ಲಿ ಮೂವರಲ್ಲಿ ಸೋಂಕು ಪತ್ತೆಯಾಗಿದೆ.
ಕಂಪನಿ ಮೀಟಿಂಗ್ ನಲ್ಲಿ 6 ಮಂದಿ ಪಾಲ್ಗೊಂಡಿದ್ದು ಇದೀಗ ಮೂವರಿಗೆ ಸೋಂಕು ಪಾಣಿಸಿಕೊಂಡಿದೆ. ಕಂಪನಿಯಲ್ಲಿ ಒಟ್ಟು 60ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದು ಎಲ್ಲರನ್ನೂ ಟೆಸ್ಟ್ ಮಾಡಲಾಗಿದೆ. ವಿದೇಶದಿಂದ ಬಂದವರನ್ನು ಒಂದು ವಾರ ಕ್ವಾರೆಂಟೈನ್ ಮಾಡಬೇಕಿತ್ತು ಆದರೆ ಆರೋಗ್ಯ ಸಿಬ್ಬಂದಿ ಯ ಬೇಜವಾಬ್ದಾರಿಯಿಂದ ಇಂತಹ ಘಟನೆಗಳು ಮರುಕಳಿಸುತ್ತಲೇ ಇವೆ.
Kshetra Samachara
05/12/2021 06:19 pm