ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರೂಪಾಂತರಿ ವೈರಸ್: ರಾಜ್ಯದಲ್ಲಿ ಹೈ ಅಲರ್ಟ್

ವರದಿ: ಗಣೇಶ ಹೆಗಡೆ

ಬೆಂಗಳೂರು: ವಿದೇಶದಲ್ಲಿ ಕಾಣಿಸಿಕೊಳ್ಳುತ್ತಿರುವ ರೂಪಾಂತರಿ ವೈರಸ್ ತೀವ್ರ ಆತಂಕ ಸೃಷ್ಟಿಸುತ್ತಿದೆ.

B.1.1.529 ಎಂಬ ಹೊಸ ಕೋವಿಡ್​ ರೂಪಾಂತರಿ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಸೂಚನೆ‌ ನೀಡಲಾಗಿದೆ.

ಈಗಾಗಲೇ ಬೋಟ್ಸ್‌ವಾನಾದಲ್ಲಿ 3, ದಕ್ಷಿಣ ಆಫ್ರಿಕಾದಲ್ಲಿ 6, ಹಾಂಕಾಂಗ್‌ನಲ್ಲಿ 1 ಹೊಸ ತಳಿ ಪತ್ತೆಯಾಗಿವೆ.‌

B.1.1529 ಹೊಸ ತಳಿಯಾಗಿದೆ. ಹೆಚ್ಚು ವೇಗವಾಗಿ ಹರಡಲಿದೆ ಎಂದು ತಜ್ಞರು ಹೇಳ್ತಿದ್ದಾರೆ. ವ್ಯಾಕ್ಸಿನ್ ಪ್ರೊಟೆಕ್ಷನ್ ಮೀರಿಯೂ ಸೋಂಕು ತೀವ್ರಗೊಳ್ಳುವ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಹೀಗಾಗಿ, ಕೇಂದ್ರದಿಂದಲೂ ಅಲರ್ಟ್ ಬಂದ ಹಿನ್ನೆಲೆ ಆರೋಗ್ಯ ಇಲಾಖೆಯಿಂದ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ, ಈ ಮೂರು ದೇಶಗಳಿಂದ ಬರುವವರಿಗೆ ಕಡ್ಡಾಯ ಟೆಸ್ಟ್ ಹಾಗೂ ಟ್ರ್ಯಾಕಿಂಗ್ ಮಾಡುವಂತೆ ಆದೇಶಿಸಲಾಗಿದೆ.

ವಿದೇಶಗಳಿಂದ ಬಂದವರಲ್ಲಿ ಪಾಸಿಟಿವ್ ಕಂಡು ಬಂದರೆ ಸ್ಯಾಂಪಲ್‌ಗಳನ್ನು ಸೀಕ್ವೆನ್ಸಿಂಗ್ ಮಾಡುವಂತೆ ಕೂಡ ಸಲಹೆ ನೀಡಲಾಗಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಟ್ಟೆಚ್ಚರ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.

Edited By : Shivu K
Kshetra Samachara

Kshetra Samachara

27/11/2021 11:53 am

Cinque Terre

1.03 K

Cinque Terre

0

ಸಂಬಂಧಿತ ಸುದ್ದಿ