ಬೆಂಗಳೂರು. ಜಿಮ್ ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆ ಕುಸಿದು ಬಿದ್ದು ಪ್ರಾಣ ಬಿಟ್ಟ ಘಟನೆ ಬೆಂಗಳೂರಿನ ಮಲ್ಲೇಶ್ ಪಾಳ್ಯದ ಜಿಮ್ ನಲ್ಲಿ ನಡೆದಿದೆ.
44 ವರ್ಷದ ವಿನಯ್ ಕುಮಾರಿ ಇಂದು ಬೆಳಿಗ್ಗೆ ವರ್ಕೌಟ್ ಮಾಡ್ತಿರುವಾಗ ನಡೆದ ಘಟನೆ ನಡೆದಿದ್ದು, ತಕ್ಷಣ ಆಸ್ಪತ್ರೆ ಸಾಗಿಸುತಿರುವಾಗ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ.
ನಿತ್ಯ ಜಿಮ್ , ಡ್ಯಾನ್ಸ್ ಅಂತ ಫಿಟ್ ಆಗಿದ್ದ ವಿನಯ್ ಕುಮಾರಿ ಎಂದಿನಂತೆ ಇಂದು ವರ್ಕೌಟ್ ಮಾಡ್ತಿದ್ರು. ಆದ್ರೆ ಓವರ್ ವೇಟ್ ಪುಷ್ ಅಪ್ ನಿಂದ ಕಾರ್ಡಿಯಾಕ್ ಅರೆಸ್ಟ್ ಆಗಿರೋ ಸಾಧ್ಯತೆಯಿದೆ ಎಂದು ಹೇಳಲಾಗ್ತಿದೆ.
ಸದ್ಯ ಸಿ.ವಿ.ರಾಮನ್ ನಗರ ಆಸ್ಪತ್ರೆಯಲ್ಲಿ ಮೃತದೇಹವಿದ್ದು. ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
26/03/2022 03:47 pm