ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೀಕೆಂಡ್ ಕರ್ಫ್ಯೂ ಉಲ್ಲಂಘಿಸಿ ಸಂಕ್ರಾಂತಿ ಆಚರಣೆ: ಕಿಚ್ಚು ಹಾಯಿಸೋ ಸಂದರ್ಭದಲ್ಲಿ ಬೆಂಕಿಗೆ ಬಿದ್ದ ಬಾಲಕ

ಬೆಂಗಳೂರು: ವೀಕೆಂಡ್ ಕರ್ಫ್ಯೂ ಇದ್ದರೂ ಸಹ ರೂಲ್ಸ್ ಬ್ರೇಕ್ ಮಾಡಿ ನಿನ್ನೆ ದಿನ ಹೆಸರಘಟ್ಟದ ಗ್ರಾಮದಲ್ಲಿ ಸಂಕ್ರಾಂತಿ ಹಬ್ಬ ಆಚರಿಸಲಾಗಿದೆ.ಹಸುಗಳ ಕಿಚ್ಚು ಹಾಯಿಸುವ ಸಂದರ್ಭದಲ್ಲಿ ಬಾಲಕನೊಬ್ಬ ಬೆಂಕಿಗೆ ಬಿದ್ದ ಘಟನೆನೂ ಇಲ್ಲಿ ನಡೆದು ಹೋಗಿದೆ.

ಕೋವಿಡ್ ನಿಯಮ ಉಲ್ಲಂಘನೆ ಜೊತೆಗೆ ನಡೆದ ಸಂಕ್ರಾಂತಿ ಕಿಚ್ಚು ಹಾಯಿಸೋ ಕಾರ್ಯಕ್ರಮದಲ್ಲಿ ಬಾಲಕ ಬೆಂಕಿಯಲ್ಲಿ ಬಿದ್ದಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲೂ ಸೆರೆ ಆಗಿದೆ. ಸದ್ಯಕ್ಕೆ ಬಾಲಕನನ್ನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ.

ಈಗಾಗಲೇ ಈ ಗ್ರಾಮದಲ್ಲಿ 38 ಕೊರೊನಾ ಪ್ರಕರಣಗಳು ದಾಖಲಾಗಿವೆ. ಆದರೂ ಗ್ರಾ.ಪಂ ಅಧ್ಯಕ್ಷ ಶಿವಾನಂದ ನೇತೃತ್ವದಲ್ಲಿ ಸಂಕ್ರಾಂತಿ ಆಚರಣೆ ಮಾಡಲಾಗಿದೆ. ಆಚರಣೆ ವೇಳೆ ಮಾಸ್ಕ್ ಧರಿಸದೇ ಅಂತರವನ್ನೂ ಕಾಪಾಡದೇ ಕೋವಿಡ್ ನಿಯಮ ಉಲ್ಲಂಘನೆ ಆಗಿದೆ. ಸೋಲದೇವನಹಳ್ಳಿಯ ಪೊಲೀಸರು ಇದನ್ನ ಕಣ್ಣಾರೆ ಕಂಡ್ರೂ ನಿರ್ಲಕ್ಷ್ಯ ತೋರಿದ್ದಾರೆ ಅನ್ನೋ ಆರೋಪವೂ ಕೇಳಿ ಬಂದಿದೆ.

Edited By : Manjunath H D
PublicNext

PublicNext

16/01/2022 05:02 pm

Cinque Terre

49.84 K

Cinque Terre

2

ಸಂಬಂಧಿತ ಸುದ್ದಿ