ವಿಧಾನಸೌಧ : ಉಡುಪಿ ಜಿಲ್ಲೆಯ ಗಂಗೊಳ್ಳಿಯಲ್ಲಿ ಮೀನುಗಾರಿಕೆ ಜೆಟ್ಟಿ ನಿರ್ಮಾಣ ಕಾಮಗಾರಿ ಸೆ. 28ರಂದು ಕುಸಿದಿತ್ತು. ನಾನು ಅಲ್ಲಿಗೆ ಭೇಟಿ ನೀಡಿ ಮೀನುಗಾರರು ಹಾಗೂ ಇಂಜಿನಿಯರ್ ಗಳಿಂದ ಮಾಹಿತಿ ಪಡೆದಿದ್ದೇನೆ ಎಂದು ಮೀನುಗಾರಿಕೆ ಸಚಿವ ಎಸ್. ಅಂಗಾರ ಹೇಳಿದರು.
2001ರಲ್ಲಿ ಕೇಂದ್ರದ ಅನುದಾನ 8.32 ಕೋಟಿ ರೂ. ಮಂಜೂರಾಗಿತ್ತು. 24-1-2001 ರಂದು ಈ ಯೋಜನೆಗೆ ಅನುಮೋದನೆ ಸಿಕ್ಕಿತ್ತು. ಡ್ರೆಜ್ಜಿಂಗ್, ವಿದ್ಯುದ್ದೀಕರಣ, ಜೆಟ್ಟಿ ನಿರ್ಮಾಣ, ಹರಾಜು ಕಟ್ಟಡ ಸೇರಿ ಹಲವು ಕಾಮಗಾರಿಗೆ ಹಣ ಬಿಡುಗಡೆ ಆಗಿತ್ತು. 2007 ರಲ್ಲಿ ಈ ಕಾಮಗಾರಿ ಪೂರ್ಣ ಆಗಿತ್ತು. ಆಗ ಕಾಮಗಾರಿ ಸರಿ ಆಗಿಲ್ಲ ಅಂತ ದೂರು ಬಂದಿತ್ತು.
ಸುರತ್ಕಲ್ ಎನ್ ಐಟಿಕೆ ತಜ್ಞರಿಂದ ತನಿಖೆ ಮಾಡಲಾಗಿತ್ತು. ಈ ತಂಡ ಕಳಪೆ ಕಾಮಗಾರಿ ಆಗಿಲ್ಲ ಅಂತ ವರದಿ ನೀಡಿತ್ತು. 2010 ರಲ್ಲಿ ಮತ್ತೆ ಕುಸಿತ ಆಗಿತ್ತು. ಆಗ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ರಿಂದ ವರದಿ ತರಿಸಿಕೊಂಡಿತ್ತು. ಈ ವರದಿಯನ್ನು ಪಡೆದುಕೊಂಡು ಪರಿಶೀಲಿಸುತ್ತೇನೆ.
2021 ರಲ್ಲಿ 12 ಕೋಟಿ ರೂ. ಜೆಟ್ಟಿಗೆ ಬಿಡುಗಡೆಯಾಗಿದೆ. ಇದರಲ್ಲಿ 200 ಮೀಟರ್ ಕಾಮಗಾರಿ ನಡೆಸಲಾಗಿತ್ತು. 2021 ರಲ್ಲಿ ಹಳೆ ಜೆಟ್ಟಿ ರಿಪೇರಿ, ಮುಂದುವರಿದ ಕಾಮಗಾರಿಗೆ 12 ಕೋಟಿ ಕೊಟ್ಟಿದ್ರು. 75 ಮೀಟರ್ ಉದ್ದದ ಕಾಮಗಾರಿ ಕುಸಿತ ಆಗಿತ್ತು. 2001 ರಲ್ಲಿ ಆಗಿದ್ದ ಜೆಟ್ಟಿ 2021ರಲ್ಲಿ ಕಟ್ಟಿದ್ದ ಜೆಟ್ಟಿ ಮೇಲೆಯೇ ಬಿದ್ದಿದೆ.
ಗುತ್ತಿಗೆದಾರರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅಂತ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಜೆಟ್ಟಿ ಕುಸಿದಿದ್ದರಿಂದ ಮೀನುಗಾರರಿಗೆ ಸಮಸ್ಯೆ ಆಗ್ತಿದೆ. ಕೂಡಲೇ ತೆರವು ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ಸಚಿವ ಅಂಗಾರ ತಿಳಿಸಿದರು.
Kshetra Samachara
03/10/2022 05:56 pm