ಬೆಂಗಳೂರು: ಒಂದು ಕಡೆ ಲೋಕಾಯುಕ್ತ ಪುನಃ ಕಾರ್ಯಾರಂಭ ಮಾಡಿ ತಿಂಗಳು ಕಳೆದಿದ್ದು, ಇದ್ರ ಬೆನ್ನಲ್ಲೆ ಎಸಿಬಿ ಕೂಡ ರದ್ದಾಗಿದೆ. ಈಗಾಗ್ಲೆ ಲೋಕಾಯುಕ್ತ ದಾಳಿ, ಕೇಸು ಅಂತ ಕಾರ್ಯಪ್ರವೃತ್ತರಾಗಿದ್ರೆ. ಎಸಿಬಿ ಮಾತ್ರ ನಿಂತ ನೀರಿನಂತಾಗಿದೆ. ಸದಾ ತನಿಖೆ, ವಿಚಾರಣೆ ದಾಳಿ ಅಂತ ಕರ್ತವ್ಯದಲ್ಲಿ ತೊಡಗಿದ್ದ ಅಧಿಕಾರಿ ಸಿಬ್ಬಂದಿಗೆ ಸದ್ಯ ಕೆಲಸ ಇಲ್ಲದಂತಾಗಿದೆ.
ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಲೋಕಾಯುಕ್ತಕ್ಕೂ ವರ್ಗಾಯಿಸದೆ ಬೇರೆ ಕಡೆಗೂ ನಿಯೋಜಿಸದೆ ರಾಜ್ಯ ಸರ್ಕಾರದ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ.
ಎಸಿಬಿಯಲ್ಲಿರೋ 452 ಕಾರ್ಯಕಾರಿ ಅಧಿಕಾರಿ ಹಾಗೂ ಸಿಬ್ಬಂದಿಗಳಿದ್ದು, ಕಳೆದ ಆಗಸ್ಟ್ 26ರಂದು ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ಹಸ್ತಾಂತರಿಸುವಂತೆ ಎಸಿಬಿಗೆ ಸರ್ಕಾರ ಆದೇಶಿಸಿತ್ತು. ಇದರಂತೆ ರಾಜ್ಯದ ಎಲ್ಲಾ ಎಸಿಬಿ ಜಿಲ್ಲಾ ವಿಭಾಗಗಳಲ್ಲಿ ದಾಖಲಾಗಿದ್ದ, ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಿವೆ. ಬೆಂಗಳೂರು ನಗರದಲ್ಲಿ ದಾಖಲಾಗಿರುವ ಕೇಸ್ ಗಳನ್ನ ಇನ್ನಷ್ಟೇ ಹಸ್ತಾಂತರ ಪ್ರಕ್ರಿಯೆ ಪೂರ್ಣವಾಗಬೇಕಿದೆ.
ಲೋಕಾಯುಕ್ತಕ್ಕೆ ಬರುವ ದೂರುಗಳು ದಿನೇ ದಿನೇ ಏರಿಕೆಯಾಗುತ್ತಿವೆ. ಜೊತೆಗೆ ವರ್ಗವಾದ ಪ್ರಕರಣಗಳನ್ನು ತನಿಖೆ ನಡೆಸಬೇಕಿದೆ. ಈ ನಡುವೆ ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಲೋಕಾಯುಕಕ್ಕೆ ವರ್ಗವಾದಾಗಿನಿಂದ ಎಸಿಬಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಅಕ್ಷರಶಃ ಕೆಲಸವೇ ಇಲ್ಲದಂತಾಗಿದೆ.
ಇನ್ನೂ ಎಸಿಬಿಯಲ್ಲಿರುವ ಅಧಿಕಾರಿ-ಸಿಬ್ಬಂದಿ ಹಾಗೂ ಕಚೇರಿ ಸೇರಿ ವಿವಿಧ ಸೌಕರ್ಯಗಳನ್ನ ಯಥಾವತ್ ಆಗಿ ಲೋಕಾಯುಕ್ತಕ್ಕೆ ನೀಡುವಂತೆ ನ್ಯಾ.ಬಿ.ಎಸ್.ಪಾಟೀಲ್ ಪತ್ರ ಬರೆದು ತಿಂಗಳಾದರೂ ಸರ್ಕಾರ ಗಮನಹರಿಸಿಲ್ಲ. ಲೋಕಾಯುಕ್ತ ಹಾಗೂ ರದ್ದುಗೊಂಡಿರುವ ಎಸಿಬಿಯು ಸಿಬ್ಬಂದಿ ಹಾಗೂ ಆಡಳಿತ ಸೇವಾ ಸುಧಾರಣೆ ಇಲಾಖೆ ವ್ಯಾಪ್ತಿಗೆ ಬರಲಿದ್ದು, ಈ ಬಗ್ಗೆ ಆದಷ್ಟು ಬೇಗೆ ಗಮನ ಹರಿಸಬೇಕಾಗಿದೆ.
PublicNext
03/10/2022 04:02 pm