ಬೆಂಗಳೂರು: ಮೂರನೇ ದಿನ ಕೂಡ ಅಧಿಕಾರಿಗಳು ರಾಜಕಾಲುವೆ ಒತ್ತುವರಿ ತೆರವು ಕಾರ್ಯದಲ್ಲಿ ನಿರತರಾಗಿದ್ದರು. ಇಂದೂ ಕೂಡ ಮಹದೇವಪುರ ವ್ಯಾಪ್ತಿಯಲ್ಲಿ ಜೆಸಿಬಿಗಳ ಘರ್ಜನೆ ಜೋರಾಗಿದ್ದು. ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಿಸಿದ ಗೋಡೆ ಮನೆಗಳನ್ನು ತೆರವು ಮಾಡಿದ್ದಾರೆ.
ನಿನ್ನೆ ಶಾಸಕ ಎನ್ ಎ ಹ್ಯಾರಿಸ್ ಗೆ ಸೇರಿದ ನಲಪಾಡ್ ಅಕಾಡೆಮಿ ರಾಜಕಾಲುವೆ ಒತ್ತುವರಿ ಮಾಡಿ ಗೋಡೆ ನಿರ್ಮಿಸಿತ್ತು ಅಧಿಕಾರಿಗಳು ಜೆಸಿಬಿ ನುಗ್ಗಿಸಿ ತೆರವು ಮಾಡುವ ಕಾರ್ಯದಲ್ಲಿ ನಿರತರಾಗಿದ್ದರು ಆದರೆ ಹಲವಾರು ಗೊಂದಲಗಳಿಂದ ನೆನ್ನೆ ರಾಜಕಾಲುವೆ ಒತ್ತುವರಿ ಡೆಮಾಲಿಷನ್ ನಿಲ್ಲಿಸಲಾಗಿತ್ತು.
ಇಂದು ಮತ್ತೆ ಅಧಿಕಾರಿಗಳು ಜೆಸಿಬಿಗಳನ್ನು ನುಗ್ಗಿಸಿ ನಲಪಾಡ್ ಅಕಾಡೆಮಿಯಲ್ಲಿ ತೆರವು ಕಾರ್ಯಾಚರಣೆ ಆರಂಭಿಸಿದರು. 2.5 ಅಡಿ ಅಗಲ 150.5 ಅಡಿಯಷ್ಟು ರಾಜಕಾಲುವೆ ಜಾಗ ಒತ್ತುವರಿ ತೆರವು ಅಧಿಕಾರಿಗಳು ಮಾಡಿದ್ದಾರೆ. ಚೈತನ್ಯ ಟೆಕ್ನೋ ಸ್ಕೂಲ್ನಿಂದಲೂ ಒತ್ತುವರಿ ಮಾಡಲಾಗಿದ್ದು, ರಾಜಕಾಲುವೆ ಒತ್ತುವರಿ ಮಾಡಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ.
ಮಹದೇವಪುರ ಕ್ಷೇತ್ರದ ಮುನ್ನೆಕೊಳಲು ಶಾಂತಿನಿಕೇತನ ಲೇಔಟ್ನ ವಿದ್ಯಾನಿಕೇತನ ಬಡಾವಣೆಯಲ್ಲಿರುವ ಚೈತನ್ಯ ಶಾಲೆ, ರಾಜಕಾಲುವೆ ಸಂಪೂರ್ಣವಾಗಿ ಮುಚ್ಚಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಬಿಬಿಎಂಪಿ ಸಿಬ್ಬಂದಿ ಒತ್ತುವರಿ ಜಾಗ ತೆರವು ಮಾಡಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
14/09/2022 06:53 pm