ಬೆಂಗಳೂರು: ಬೆಂಗಳೂರಿನಲ್ಲಿ ಮಳೆಯಿಂದಾಗಿ ರಸ್ತೆಗಳು ಮತ್ತೆ ಹಾಳಾಗಿದೆ. ನಗರದ ಹಲವಡೆ ರಸ್ತೆಗಳು ಮಳೆಯಿಂದಾಗಿ ಸಂಪೂರ್ಣವಾಗಿ ಜಲಾವೃತ ವಾಗಿದೆ. ಅಂತಹ ನಗರದಲ್ಲಿ ಹೆಚ್ಚಿನ ಗಮನಹರಿಸಿ ಸಮಸ್ಯೆ ಬಗೆಹರಿಸಲು ಎಲ್ಲಾ ಬಿಗಿ ಕ್ರಮಗಳನ್ನು ಬಿಬಿಎಂಪಿಯಿಂದ ತೆಗೆದುಕೊಳ್ಳಲಾಗಿದೆ.
ಈಗಾಗಲೇ ನಗರದಲ್ಲಿ 50 ಕಡೆಗಳಲ್ಲಿ ಸೆನ್ಸಾರ್ ಡಿವೈಸ್ ಗಳನ್ನ ಅಳವಡಿಸಲಾಗಿದೆ.ಈಗಾಗಲೇ ನಗರದ ಎಲ್ಲಾ ಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. 54 ಕಡೆಗಳಲ್ಲಿ ಮಳೆ ನೀರು ನುಗ್ಗಿ ಅನಾಹುತ ಆಗುತ್ತೆ. ಅಂತಹ ಕಡೆಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದಾರೆ.
Kshetra Samachara
10/08/2022 01:03 pm