ಬೆಂಗಳೂರು: ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ವಿವಾದ ಮುಗಿಯುವ ಲಕ್ಷಣ ಕಾಣ್ತಿಲ್ಲ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಆರ್. ಅಶೋಕ್, 1964 ರಲ್ಲಿ ಇದು ಕಂದಾಯ ಇಲಾಖೆಗೆ ಸೇರಿದ್ದು ಎನ್ನುವ ದಾಖಲೆ ಪಕ್ಕ ಇದೆ. ಆದ್ರೂ ಮೈದಾನ ನಮ್ಮದೇ ಎಂಬ ಆದೇಶ ಇದೆ ಅಂತ ವಕ್ಫ್ ಬೋರ್ಡ್ ನವರು ಹೇಳ್ತಿದ್ದಾರೆ ಎಂದು ಹೇಳಿದ್ರು.
ಇನ್ನು ನಿಜವಾಗಿಯೂ ದಾಖಲೆ ಕೊಡಿ ಅಂತ ಕೇಳಿದ್ರೆ, ಸ್ಟೇ ಹೋಗಿದ್ದಾರೆ.ಸರ್ಕಾರದವರು ಸ್ಕೂಲ್ ಕಟ್ಟುತ್ತಾರೆ ಅಂತ ಸ್ಟೇ ಗೆ ಹೋಗಿದ್ದಾರೆ.ಆ ದಾಖಲೆಗಳನ್ನ ಯಾರು ಕೊಟ್ಟಿಲ್ಲ.ಆದ್ದರಿಂದ ಕಾರ್ಪೋರೇಷನ್ ನವರು ಪರಿಶೀಲನೆ ಮಾಡಿ ಕಂದಾಯ ಇಲಾಖೆಗೆ ಬರುತ್ತೆ ಅಂತ ಹೇಳಿದ್ದಾರೆ ಎಂದರು. ಮೈದಾನ ಕಂದಾಯ ಇಲಾಖೆಯ ಜಮೀನಾಗಿರುವುದರಿಂದ ಅಲ್ಲಿ ಏನ್ ಮಾಡಬೇಕು ಎಂಬುದನ್ನ ಕಂದಾಯ ಇಲಾಖೆ ತೀರ್ಮಾನ ಮಾಡುತ್ತದೆ. ಈ ಬಗ್ಗೆ ಯಾವುದೇ ಗೊಂದಲ ಬೇಡ ಎಂದರು.
PublicNext
08/08/2022 03:04 pm