ಬೆಂಗಳೂರು : ಬೆಂಗಳೂರು ನಗರದ ಜಿಲ್ಲಾಧಿಕಾರಿಯನ್ನಾಗಿ ಕೆ.ಶ್ರೀನಿವಾಸ್ ರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಈ ಮೊದಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕೆ.ಶ್ರೀನಿವಾಸ್ ರವರು ಸೇವೆ ಸಲ್ಲಿಸಿದ್ದರು.
ಕೆಲವು ದಿನಗಳ ಹಿಂದೆ ಮಂಜುನಾಥ್ ರವರು ಬೆಂಗಳೂರು ನಗರದ ಜಿಲ್ಲಾಧಿಕಾರಿಯಾಗಿದ್ದ ವೇಳೆ ACB ಬಲೆಗೆ ಬಿದ್ದಿದ್ದರು. ಜಮೀನು ದಾಖಲೆ ಸಂಬಂಧ 5ಲಕ್ಷ ಹಣವನ್ನು ಡಿ.ಸಿ.ಕಚೇರಿ ಸಿಬ್ಬಂದಿ ಪಡೆದು, ಮಂಜುನಾಥ್ ರವರ ಪಾತ್ರ ಸಾಭೀತಾದ್ದರಿಂದ ಬಂಧನಕ್ಕೊಳಗಾಗಿದ್ದರು. ಮಂಜುನಾಥ್ ಬಂಧನದಿಂದ ಶ್ರೀಸಂಗಪ್ಪರವರು ಬೆಂಗಳೂರು ನಗರ ಜಿಲ್ಲೆಯ ಪ್ರಭಾರ ಜಿಲ್ಲಾಧಿಕಾರಿಯಾಗಿದ್ದರು.
ಇದೀಗ ಸಂಗಪ್ಪರವರ ಬದಲಿಗೆ ಕೆ.ಶ್ರೀನಿವಾಸ್ ರನ್ನು ಬೆಂಗಳೂರು ನಗರದ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ನಾಗಪ್ಪ.ಎಸ್.ಪರೀತ್ ಆದೇಶ ಹೊರಡಿಸಿದ್ದಾರೆ.
Kshetra Samachara
18/07/2022 10:28 pm