ಬೆಂಗಳೂರು: ರಸ್ತೆಯಲ್ಲಿ ಕೆಲವು ವರ್ಷಗಳಿಂದ ಕಸ ತಿಂದುಂಡು ಬೀದಿ ಬೀದಿ ಅಲೆಯುತ್ತಿವೆ ಈ ಹಸು ಗುಂಪು. ಹೆಚ್ಚಾಗಿ ಬಿಟಿಎಂ ಲೇಔಟ್ ರಸ್ತೆಗಳಲ್ಲಿಯೇ ಜೀವನ ಕಟ್ಟಿಕೊಂಡಿದೆ ಈ ಜಾನುವಾರುಗಳು. ದಿನನಿತ್ಯ ಕಸದಲ್ಲಿರುವ ಪ್ಲಾಸ್ಟಿಕ್ ಗಳನ್ನೂ ತಿನ್ನುತ್ತಿರುವ ಹಸುಗಳಲ್ಲಿ ಕೆಲವು ಕಸಾಯಿಖಾನೆಗೂ ಕಳ್ಳ ಸಾಗಣೆಯಾಗಿ ಅಸು ನೀಗಿವೆ.
ಅನಾಥ ಗೋವುಗಳ ರಕ್ಷಣೆ ಬಗ್ಗೆ ಬಿಬಿಎಂಪಿಗೆ ಎಷ್ಟೇ ಬಾರಿ ಸ್ಥಳೀಯರು ಮನವಿ ಮಾಡಿದರೂ ಮನ ಕರಗದ ಬಿಬಿಎಂಪಿ ಅಧಿಕಾರಿಗಳು ಗೋಶಾಲೆಗೆ ಈ ಹಸುಗಳನ್ನು ಸಾಗಿಸಲು ಮುಂದಾಗುತ್ತಿಲ್ಲ ಎಂಬುದು ವಿಪರ್ಯಾಸವೇ ಸರಿ.
- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
Kshetra Samachara
07/07/2022 07:38 pm