ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೌರ ಕಾರ್ಮಿಕರ ಮುಷ್ಕರ; ರಸ್ತೆಯಾಯಿತು ಕಸದ ಆಗರ!

ಬೆಂಗಳೂರು: ಬೆಳಗ್ಗೆ 8 ಗಂಟೆಯಾದರೆ ಸಾಕು, ಮಹಿಳೆಯರೆಲ್ಲ ಕಸ ತಗೊಂಡು ಹೋಗುವ ಗಾಡಿಗೆ ಕಾಯುತ್ತಿರುತ್ತಾರೆ. ಕೈಯಲ್ಲಿ ಕಸದ ಬುಟ್ಟಿ ಅಥವಾ ಡಸ್ಟ್‌ ಬಿನ್‌ ಇರುತ್ತೆ. ಆದರೆ, ಇವತ್ತು ಕಸದ ಗಾಡಿ ಬರಲೇ ಇಲ್ಲ! ನಾಳೆ ಕೂಡ ಗಾಡಿ ಬರೋದು ಡೌಟ್. ಆದ್ದರಿಂದ ಏರಿಯಾ ರಸ್ತೆಗಳು ಕಸ- ತ್ಯಾಜ್ಯದಿಂದ ತುಂಬಿತ್ತು.

ಇದಕ್ಕೆಲ್ಲ ಕಾರಣ ಪೌರ ಕಾರ್ಮಿಕರ ಮುಷ್ಕರ. ಪೌರಕಾರ್ಮಿಕರು ಇಂದಿನಿಂದ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆಗೆ ಇಳಿದಿದ್ದಾರೆ. ಇದರಿಂದ ಸಿಲಿಕಾನ್ ಸಿಟಿಯು ಗಾರ್ಬೇಜ್ ಸಿಟಿಯಾಗಿ ಮಾರ್ಪಡುತ್ತಿದೆ. ಪೌರಕಾರ್ಮಿಕರ ಪ್ರತಿಭಟನೆಯ ಮೊದಲ ದಿನದ ಎಫೆಕ್ಟ್ ಈ ರೀತಿ ಇದೆ! ಇನ್ನು ಹೇಗೋ?

18000 ಪೌರಕಾರ್ಮಿಕರು ಇಂದಿನಿಂದ ಪ್ರತಿಭಟನೆಗೆ ಇಳಿದಿದ್ದಾರೆ. ಗುತ್ತಿಗೆ ಆಧಾರದಲ್ಲಿ ಇರುವ ಪೌರಕಾರ್ಮಿಕರನ್ನು ಪರ್ಮನೆಂಟ್ ಮಾಡಬೇಕೆಂದು ಮತ್ತು ತಿಂಗಳ ವೇತನವನ್ನು ಹೆಚ್ಚು ಮಾಡಬೇಕೆಂದು ಸರ್ಕಾರಕ್ಕೆ ಪ್ರಮುಖ ಬೇಡಿಕೆ ಇಟ್ಟಿದ್ದಾರೆ.

- ನವೀನ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು

Edited By : Nagesh Gaonkar
PublicNext

PublicNext

01/07/2022 06:23 pm

Cinque Terre

43.15 K

Cinque Terre

1

ಸಂಬಂಧಿತ ಸುದ್ದಿ