ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ ಸದ್ಯಕ್ಕೆ ಬಗೆ ಹರಿಯುವಂತೆ ಕಾಣುತ್ತಿಲ್ಲ. ಇದೀಗ ಮತ್ತೆ ವಕ್ಫ್ ಬೋರ್ಡ್ ಗೆ ಬಿಬಿಎಂಪಿ ಮತ್ತೊಂದು ನೋಟಿಸ್ ನೀಡಿದೆ. ಹಲವು ದಾಖಲೆಗಳನ್ನು ಸಲ್ಲಿಸುವಂತೆ ಕೋರಿ ವಕ್ಫ್ ಬೋರ್ಡ್ ಗೆ ನೋಟಿಸ್ ನೀಡಿದೆ.
ಚಾಮರಾಜ ಪೇಟೆ ಈದ್ಗಾ ಮೈದಾನ ನಮ್ಮ ಜಾಗ ಎಂದು ಹೇಳ್ತಿರುವ ವಕ್ಫ್ ಬೋರ್ಡ್ ಗೆ ಮತ್ತೆ ತಲೆ ನೋವು ಶುರುವಾಗಿದೆ. ಕೋರ್ಟ್ ಆದೇಶ ಪ್ರತಿ, ಮೂಲ ಕ್ರಯ ಪತ್ರ, ಪಾಣಿ ಧೃಡೀಕರಣ ಪತ್ರ ಸೇರಿದಂತೆ 9 ದಾಖಲೆಗಳನ್ನು ಸಲ್ಲಿಸುವಂತೆ ಪಾಲಿಕೆ ವಕ್ಫ್ ಬೋರ್ಡ್ ಗೆ ಸೂಚನೆ ನೀಡಿದೆ.
PublicNext
01/07/2022 03:30 pm