ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ಸಿಬ್ಬಂದಿ ವರ್ಗಾವಣೆಗಾಗಿ ಕಮಿಷನರ್ ಕಚೇರಿಯಲ್ಲಿ ಅಹೋರಾತ್ರಿ ಕೌನ್ಸಿಲಿಂಗ್

ಬೆಂಗಳೂರು: ನಗರದಲ್ಲಿ ಪೊಲೀಸ್ ಸಿಬ್ಬಂದಿ ವರ್ಗಾವಣೆ ಹಿನ್ನೆಲೆ ಕಮಿಷನರ್ ಕಛೇರಿಯಲ್ಲಿ ರಾತ್ರಿಪೂರ್ತಿ ಸಿಬ್ಬಂದಿ ಕೌನ್ಸಿಲಿಂಗ್ ನಡೆಸಲಾಗಿದೆ.

ಆಡಳಿತ ವಿಭಾಗ ಡಿಸಿಪಿ ನಿಶಾ ಜೇಮ್ಸ್ ನೇತೃತ್ವದಲ್ಲಿ ನಡೆದ ಕೌನ್ಸಿಲಿಂಗ್ ನಡೆಸಲಾಗಿದ್ದು, ನಗರದ ಒಂದು ವಿಭಾಗದಲ್ಲಿ ಹದಿನೈದು ವರ್ಷಗಳ ಕಾಲ ಕೆಲಸ ಮಾಡಿದ್ದ ಸಿಬ್ಬಂದಿಗೆ ಬೇರೆ ವಿಭಾಗಕ್ಕೆ ವರ್ಗಾವಣೆ ಮಾಡುವ ಮುನ್ನ ನಿನ್ನೆ ಬುಧವಾರ ಕೌನ್ಸಿಲಿಂಗ್ ಕರೆಯಲಾಗಿತ್ತು.

ಸುಮಾರು ಐನೂರು ಸಿಬ್ಬಂದಿಗೆ ಒಂದೆ ರಾತ್ರಿಯಲ್ಲಿ ಕೌನ್ಸಿಲಿಂಗ್ ನಡೆಸಿ ಡಿಸಿಪಿ ವರ್ಗಾವಣೆ ಆದೇಶ ನೀಡಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಆಡಳಿತ ವಿಭಾಗ ವರ್ಗಾವಣೆ ನೋಟಿಫಿಕೇಶನ್ ಹೊರಡಿಸಿತ್ತು. ಈ ಹಿನ್ನೆಲೆ ಪ್ರತಿಯೊಬ್ಬರನ್ನ ವೈಯಕ್ತಿಕವಾಗಿ ಕೌನ್ಸಿಲಿಂಗ್ ನಡೆಸಲಾಯಿತು. ಇನ್ನು ಬೆಳಿಗ್ಗೆ ಕೌನ್ಸಿಲಿಂಗ್ ಬಂದ ನೂರಾರು ಸಿಬ್ಬಂದಿ ತಡರಾತ್ರಿವರೆಗೆ ಕೌನ್ಸಿಲಿಂಗ್‌ಗಾಗಿ ಕಾದು ಕೂರಬೇಕಾಯಿತು.

Edited By : Shivu K
PublicNext

PublicNext

30/06/2022 09:34 am

Cinque Terre

38.25 K

Cinque Terre

0

ಸಂಬಂಧಿತ ಸುದ್ದಿ