ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಲುಮರದ ತಿಮ್ಮಕ್ಕನಿಗೆ ಬಿಡಿಎ ನಿವೇಶನ ಪತ್ರ ನೀಡಿದ ಸಿಎಂ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಾಲುಮರದ ತಿಮ್ಮಕ್ಕ ಅವರಿಗೆ ಬಿಡಿಎ ನಿವೇಶನ ಮಂಜೂರು ಪತ್ರವನ್ನು ಇಂದು ಹಸ್ತಾಂತರಿಸಿದರು.

ಕೆಲ ದಿನಗಳ ಹಿಂದಷ್ಟೇ ಸಿಎಂ ಅವರನ್ನು ತಿಮ್ಮಕ್ಕ ಭೇಟಿ ಮಾಡಿದ್ದರು. ಸಿಎಂ ಸೂಚನೆ ಮೇರೆಗೆ ನಿವೇಶನ ಹಂಚಿಕೆ ಪತ್ರವನ್ನು ಬಿಡಿಎ ತಿಮ್ಮಕ್ಕನವರಿಗೆ ನೀಡಿತ್ತು. ಇಂದು ಮುಂಜಾನೆ ಸಿಎಂ ಅವರ ರೇಸ್ ಕೋರ್ಸ್ ನಿವಾಸದಲ್ಲಿ ಸಾಲುಮರದ ತಿಮ್ಮಕ್ಕ ಹಾಗೂ ಆಕೆಯ ಸಾಕು ಪುತ್ರನಿಗೆ ಕರಾರು ಪತ್ರವನ್ನು ಸಿಎಂ ನೀಡಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯ 7ನೇ ಬ್ಲಾಕ್ ಜೆ ಸೆಕ್ಟರ್‌ನಲ್ಲಿ ನಿವೇಶನ ಹಂಚಿಕೆಮಾಡಲಾಗಿದೆ. ಒಟ್ಟು 50*80 ಚದರ ಅಡಿಯ ನಿವೇಶನ ಇದಾಗಿರುತ್ತದೆ.

Edited By : Vijay Kumar
PublicNext

PublicNext

25/06/2022 11:12 am

Cinque Terre

13.9 K

Cinque Terre

3

ಸಂಬಂಧಿತ ಸುದ್ದಿ