ಬೆಂಗಳೂರು: ರಾಜಧಾನಿ ಬೆಂಗಳೂರಲ್ಲಿ ಮಧ್ಯಮ ವರ್ಗಕ್ಕೆ ನಿರ್ಮಿಸಲ್ಪಟ್ಟ ಫ್ಲಾಟ್ ಗಳು ಸೇಲ್ ಆಗದೆ ಹಾಗೇ ಉಳಿದುಕೊಂಡಿದೆ.
ನಗರದ ಕೊಮ್ಮಗಟ್ಟ, ಕಣಿಮಿಣಿಕೆ ಪ್ರಾಜೆಕ್ಟ್ ನಲ್ಲಿ ಸಾವಿರ ಮನೆಗಳು ಸೇಲ್ ಆಗದೆ ಖಾಲಿ ಉಳಿದಿವೆ. ಇಲ್ಲಿಗೆ ರಸ್ತೆ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸದ ಬಿಡಿಎ ಯಿಂದ ಮನೆಗಳ ಖರೀದಿಗೆ ಜನ ಮುಂದೆ ಬರ್ತಿಲ್ಲ. ಅಲ್ಲಿನ ನಿವಾಸಿಗರು ಕೂಡಾ ಹಿಡಿಶಾಪ ಹಾಕುತ್ತಿದ್ದು, 1078 ಮನೆಗಳು ಖಾಲಿ ಉಳಿದಿವೆ.
ಇನ್ನೂ ಕೊಮ್ಮಗಟ್ಟದಲ್ಲಿ ಪೇಸ್ 3,4 ಫ್ಲಾಟ್ ಗಳು ನಿರ್ಮಾಣವಾಗಿದ್ದು, ಹಳೆಯ ಮನೆಗಳು ಅಂದ್ರೆ ಪೇಸ್ 2, ಹಾಗೂ ಪೇಸ್ 1 ಗೆ ಜನ ಬರ್ತಿಲ್ಲ. ಜೊತೆಗೆ ಚಂದ್ರಲೇಔಟ್,ಕೋನದಾಸನಪುರ, ಹುಣ್ಣಗೆರೆಯಲ್ಲಿ ಫ್ಲಾಟ್ ಗಳು ನಿರ್ಮಾಣವಾಗಿದ್ದು, ಅಲ್ಲಿಗೆ ಜನರು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ.
ಒಟ್ಟಾರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಾತ್ರ ಫ್ಲ್ಯಾಟ್ ಗಳನ್ನು ನಿರ್ಮಿಸಿ ರಸ್ತೆ, ಕರೆಂಟ್, ಮೂಲ ಸೌಲಭ್ಯ ಒದಗಿಸದೇ ಇರೋದು ಜನರ ತೆರಿಗೆ ಹಣ ಪೋಲಾಗುವಂತೆ ಮಾಡಿದ್ದಾರೆ.
Kshetra Samachara
21/06/2022 08:45 pm