ವರದಿ- ಗಣೇಶ್ ಹೆಗಡೆ
ಬೆಂಗಳೂರು: ಈ ಹಿಂದೆ ಇದ್ದ 198 ವಾರ್ಡ್‍ಗಳನ್ನು 243 ವಾರ್ಡ್‍ಗಳನ್ನಾಗಿ ಪರಿವರ್ತಿಸಲಾಗಿದೆ. ಕೆಲ ಹೊಸ ವಾರ್ಡ್ಗಳಿಗೆ ಇತಿಹಾಸ ಪುರುಷರು ಹಾಗೂ ಹಿಂದೂ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹೆಸರಿಡಲಾಗಿದೆ ಎನ್ನಲಾಗಿದೆ. ಈಗಾಗಲೇ ವಾರ್ಡ್‍ಪುನರ್ ವಿಂಗಡಣೆ ಸಂಪೂರ್ಣಗೊಂಡಿದ್ದರೂ ಪರಿವರ್ತಿತ ವಾರ್ಡ್‍ಗಳ ಪಟ್ಟಿ ಮಾತ್ರ ಇದುವರೆಗೂ ಯಾರ ಕೈಗೆ ಸಿಗದಿರುವುದು ಹಲವಾರು ಅನುಮಾನಗಳಿಗೆ ಕಾರಣವಾಗಿದೆ.
ಬಿಬಿಎಂಪಿ ಮುಖ್ಯ ಮುಖ್ಯ ಆಯುಕ್ತರ ನೇತೃತ್ವದ ಸಮಿತಿ ವಾರ್ಡ್ ಪುನರ್ ವಿಂಗಡಣಾ ಸಮಿತಿ 198 ವಾರ್ಡ್‍ಗಳನ್ನು ಪುನರ್ ವಿಂಗಡಿಸಿ 243 ವಾರ್ಡ್‍ಗಳನ್ನಾಗಿ ವಿಂಗಡಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವರದಿ ಸಲ್ಲಿಸಿ ಒಂದು ವಾರ ಕಳೆಯುತ್ತ ಬಂದರೂ ಇದುವರೆಗೂ ಗೆಜೆಟ್ ನೋಟಿಫಿಕೇಷನ್ ಮಾಡಿಲ್ಲ. ಮಾತ್ರವಲ್ಲ ವಾರ್ಡ್ ಪುನರ್ ವಿಂಗಡಣಾ ವರದಿ ಸೋರಿಕೆಯಾಗದಂತೆ ನೋಡಿಕೊಳ್ಳಲಾಗಿದೆ. ಆದರೆ, ಆಯಾ ವಿಧಾನಸಭಾ ಕ್ಷೇತ್ರಗಳ ವಾರ್ಡ್ ಪುನರ್ ವಿಂಗಡಣೆ ವರದಿ ಮಾತ್ರ ಸ್ಥಳೀಯ ಶಾಸಕರ ಕೈ ಸೇರಿದೆ.
ವಾರ್ಡ್ ಪುನರ್‌ವಿಂಗಡಣಾ ವರದಿ ಬಿಜೆಪಿ ಶಾಸಕರ ಕೈ ಸೇರಿದೆ. ಅಂತಹ ಕ್ಷೇತ್ರಗಳಲ್ಲಿ ಈಗಾಗಲೇ ಬಿಜೆಪಿ ಅಭ್ಯರ್ಥಿಗಳೆಂದು ಗುರುತಿಸಿಕೊಂಡಿರುವ ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ನಿರತರಾಗಿರುವುದು ಕಂಡು ಬರುತ್ತಿದೆ. ಆದರೆ, ಒಟ್ಟಾರೆ ವಾರ್ಡ್ ಪುನರ್ ವಿಂಗಡಣಾ ವರದಿ ಮಾತ್ರ ಇದುವರೆಗೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ.
Kshetra Samachara
14/06/2022 03:48 pm