ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ತುಕ್ಕು ಹಿಡಿಯುತ್ತಿರುವ ಮೊಬೈಲ್ ಕ್ಯಾಂಟೀನ್ !

ಎಕ್ಸ್ ಕ್ಲೂಸಿವ್ ವರದಿ- ಗಣೇಶ್ ಹೆಗಡೆ

ಬೆಂಗಳೂರು: ಮಾಜಿ ಸಿಎಂ‌ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ‌ಯೋಜನೆ ಯಾಗಿತ್ತು.‌ ಹಸಿದವರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ದೊರೆಯುವ ಜಾಗಕೂಡ ಆಗಿತ್ತು. ನಾವೂ ಹೇಳೋಕೆ ಹೊರಟಿದ್ದು ಏನೆಂಬುದು ನಿಮಗೆ ಅರ್ಥವಾಗಿರಬೇಕು. ಹೌದು ರಾಜಧಾನಿಯಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ತುಕ್ಕು ಹಿಡಿಯುತ್ತಿದೆ. ಆ ಕುರಿತ ವಿಶೇಷ ವರದಿ ಇಲ್ಲಿದೆ

ಅಂದಹಾಗೆ 2017ರಲ್ಲಿ ಆರಂಭವಾದ ಅತ್ಯಂತ ಕಡಿಮೆ ದರದ ಊಟ, ತಿಂಡಿ, ಆಹಾರವನ್ನು ಇಂದಿರಾ ಕ್ಯಾಂಟೀನ್ ಎಂಬ ಹೆಸರಲ್ಲಿ ಅಂದಿನ ರಾಜ್ಯ ಸರ್ಕಾರ ನೀಡಲಾರಂಭಿಸಿತ್ತು. ಆರಂಭದಲ್ಲಿ ಬೆಂಗಳೂರಿನ 198 ವಾರ್ಡ್ ನಲ್ಲಿ ಜಾರಿಗೆ ತರಲಾಗಿತ್ತು. ಅದಾದ ಬಳಿಕ ಬಂದ ಸರ್ಕಾರವೂ ಅನುದಾನ ನೀಡುವುದರಲ್ಲಿ ತಾರತಮ್ಯ ಎಸಗಿದ‌‌ ಪರಿಣಾಮ ಈ ಯೋಜನೆ ಹಳ್ಳ ಹಿಡಿಯುತ್ತಿದೆ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ಅನ್ನು ಪಬ್ಲಿಕ್ ನೆಕ್ಸ್ಟ್ ನೀಡುತ್ತಿದೆ.

ಹೀಗೆ ನಿಂತಲ್ಲೇ ನಿಂತು ದೂಳು, ತುಕ್ಕು ಹಿಡಿದಂತೆ ಆಗಿರುವ ಇಂದಿರಾ ಮೊಬೈಲ್ ಕ್ಯಾಂಟೀನ್ ಒಮ್ಮೆ ನೋಡಿ. ಮಲ್ಲೇಶ್ವರಂ ಬಿಗ್ ಬಜಾರ್ ಎದರು ನಿಂತು ಎಷ್ಟು ತಿಂಗಳುಗಳಾಯ್ತೋ! ಇದ್ರಿಂದ ಜನರ ಹಣ, ಸರ್ಕಾರದ ಯೋಜನೆ ಹೇಗೆ ಹಳ್ಳ ಹಿಡಿದಿದೆ ಎಂಬುದು.

ಹಿಂದಿನ ಕಾಂಗ್ರೆಸ್ ಸರಕಾರವು ಒಟ್ಟು 24 ಇಂದಿರಾ ಮೊಬೈಲ್‌ ಕ್ಯಾಂಟೀನ್‌ಗಳನ್ನು ಆರಂಭಿಸಿತ್ತು. ಪ್ರತಿ ವಾಹನ ಖರೀದಿಗೆ 8.50 ಲಕ್ಷ ರೂ. ಮತ್ತು ಊಟ, ತಿಂಡಿ ವಿತರಣೆಗೆ ಅಗತ್ಯವಿರುವ ವ್ಯವಸ್ಥೆ, ವಿನ್ಯಾಸ, ಉಪಕರಣಗಳ ಅಳವಡಿಕೆಗೆ 4.85 ಲಕ್ಷ ರೂ. ವೆಚ್ಚ ಮಾಡಲಾಗಿದೆ.

ಈ ಮೊಬೈಲ್‌ ಕ್ಯಾಂಟೀನ್‌ ವಾಹನಗಳು 15 ಅಡಿಯಷ್ಟು ಉದ್ದವಿದ್ದು, ನೆರಳಿಗೆ ವ್ಯವಸ್ಥೆ ಮಾಡಲಾಗಿದೆ. ವಾಹನದ ಮೇಲ್ಭಾಗದಲ್ಲಿ 400-500 ಲೀಟರ್‌ ಸಾಮರ್ಥ್ಯ‌ದ ನೀರಿನ ಟ್ಯಾಂಕರ್‌ಗಳನ್ನು ಹೊಂದಿವೆ. ಶುದ್ಧ ಕುಡಿಯುವ ನೀರಿನ ಘಟಕವೂ ಇತ್ತು. ಸಾರ್ವಜನಿಕರು ಊಟ, ತಿಂಡಿ ಸೇವಿಸಿದ ಬಳಿಕ ತಟ್ಟೆಗಳನ್ನು ಡ್ರಮ್‌ಗೆ ಹಾಕುವ ವ್ಯವಸ್ಥೆ ಮಾಡಲಾಗಿತ್ತು.

ಜಾಗದ ಕೊರತೆ ಇರುವ ಹಿನ್ನೆಲೆಯಲ್ಲಿ ನಗರದ ಎಲ್ಲಾ ವಾರ್ಡ್ ಗಳಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಾಗಿಲ್ಲ. ಜಾಗದ ಕೊರತೆ ಇರುವ ವಾರ್ಡ್‌ಗಳಲ್ಲಿ ಸರ್ಕಾರ ಮೊಬೈಲ್ ಕ್ಯಾಂಟೀನ್ ಆರಂಭಿಸಿತ್ತು. ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಇಂದಿರಾ ಮೊಬೈಲ್ ಕ್ಯಾಂಟೀನ್ ವಾಹನಗಳನ್ನು ನಿಲ್ಲಿಸಲಾಗುತ್ತಿದೆ.ಟೆಂಪೋ ಟ್ರಾವೆಲ್ಲರ್ ಅನ್ನು ಇಂದಿರಾ ಮೊಬೈಲ್‌ ಕ್ಯಾಂಟೀನ್‌ ಆಗಿ ಪರಿವರ್ತಿಸಲಾಗಿದ್ದು, ವಾಹನದಲ್ಲಿ ಸಿಸಿಟಿವಿ ಹಾಗೂ ಜಿಪಿಎಸ್ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗಿತ್ತು. ಇದೀಗ ರಸ್ತೆಯಲ್ಲಿ ಕೆಟ್ಟು ನಿಂತಿದ್ದು ಸಾರ್ವಜನಿಕರ ಹಣ ಪೋಲಾಗುವಂತಾಗಿದೆ.

Edited By : Shivu K
PublicNext

PublicNext

04/06/2022 06:22 pm

Cinque Terre

37.02 K

Cinque Terre

2

ಸಂಬಂಧಿತ ಸುದ್ದಿ